Print this page

ಅಧ್ಯಕ್ಷರಾಗಿ ಕಲ್ಪನಾ ಬಾಲು ಅವಿರೊದವಾಗಿ ಆಯ್ಕೆ!

ಕೆ.ಆರ್.ಪೇಟೆ ತಾಲ್ಲೂಕಿನ  ತೆರ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಸ ಅಧ್ಯಕ್ಷರಾಗಿ ಎ.ಎಸ್.ಕಲ್ಪನಾ ಬಾಲು ಅವಿರೋಧವಾಗಿ ಆಯ್ಕೆಯಾದರು.

ಕೃಷ್ಣರಾಜಪೇಟೆ ತಾಲ್ಲೂಕಿನ ತೆರ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಸ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎ.ಎಸ್.ಕಲ್ಪನಾ ಬಾಲು ಅವಿರೋಧವಾಗಿ ಆಯ್ಕೆಯಾದರು ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಎಲ್.ರವಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು .ಅಧ್ಯಕ್ಷ ಸ್ಥಾನಕ್ಕೆ ಕಲ್ಪನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ ಇನ್ನೂ ಉಳಿದಂತೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ರವಿ ಅವಿರೋಧ ಅಯ್ಕೆಯನ್ನು ಪ್ರಕಟಿಸಿದರು. ಚುನಾವಣೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಜ್ಯೋತಿ, ನಿರ್ದೇಶಕರಾದ ಲತಾ, ರತ್ನಮ್ಮ, ಪವಿತ್ರ, ಲಕ್ಷ್ಮಮ್ಮ, ಮಮತ, ಸಾವಿತ್ರಮ್ಮ, ಸುಶೀಲಮ್ಮ, ಪದ್ಮಮ್ಮ ಮತ್ತು ವೇದಾವತಿ ಭಾಗವಹಿಸಿದ್ದರು.

Share this article

About Author

Madhu