Print this page

ಉಗ್ರರ ಕೃತ್ಯಕ್ಕೆ ತಾಲೂಕು ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಖಂಡನೆ!

ಉಗ್ರರ ಕೃತ್ಯಕ್ಕೆ ತಾಲೂಕು ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತೀವ್ರವಾಗಿ ಖಂಡಿಸಿ.ಉಗ್ರರನ್ನು ಸದೆಬಡೆಯಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ತಹಸೀಲ್ದಾರ್ ಶಿವಮೂರ್ತಿ ಮೂಲಕ ಕೇಂದ್ರಕ್ಕೆ ಮನವಿ. 

 ಕೆ.ಆರ್.ಪೇಟೆ: ತಾಲೂಕು ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಉಗ್ರರನ್ನು ಸದೆಬಡೆಯಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ತಹಸೀಲ್ದಾರ್ ಶಿವಮೂರ್ತಿ ಮೂಲಕ ಕೇಂದ್ರಕ್ಕೆ ಮನವಿ ಮಾಡಿ. ಬಳಿಕ ಮಾತನಾಡಿ ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಕೇಂದ್ರ ಸರ್ಕಾರವು ಕೃತ್ಯವೆಸಗಿದವರನ್ನು ಶೀಘ್ರ ಪತ್ತೆ ಹಚ್ಚಿ ಭಯೋತ್ಪಾದಕ ಸಂಘಟನೆಯ ಉಗ್ರರನ್ನು ಸದೆಬಡೆಯುವ ಕೆಲಸ ಮಾಡಬೇಕು. ದೇಶದ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ತ್ವರಿತಗತಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದೇಶದ ಅದ್ಭುತ ಶಕ್ತಿಗಳು ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಸೈನಿಕರು. ಇವರೀರ್ವರ ರಕ್ಷಣೆಯ ಜವಾಬ್ದಾರಿಯೇ ಶ್ರೇಷ್ಠ ಕಾರ್ಯ. ಜೀವದ ಹಂಗು ತೊರೆದು ದೇಶದ ಗಡಿ ಕಾಯುವ ಸೈನಿಕರಿಗೆ ವಿಶೇಷವಾಗಿ ಈ ರೀತಿಯ ಕೃತ್ಯಗಳು ಮನೋಸ್ಥೈರ್ಯ ಕಂಗೆಡಿಸುವಂತಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತಗತಿಯಲ್ಲಿ ದಿಟ್ಟ ಸಂದೇಶ ನೀಡಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು.ಕರ್ನಾಟದ ಒಬ್ಬ ಯೋಧ ಸೇರಿ 42 ಜನ ವೀರ ಮರಣವನ್ನಪ್ಪಿದ ಯೋಧರಿಗೆ ಚಿರಶಾಂತಿ ಕೋರುತ್ತಿರುವುದಾಗಿ ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಜಾನಕಿರಾಂ, ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಆನಂದ್, ಅಧ್ಯಕ್ಷ ಸಿಂಕಾ ಸುರೇಶ್, ಪತ್ರಕರ್ತರಾದ ದಿನೇಶ್, ಪ್ರವೀಣ್, ಪ್ರದೀಪ್, ಕಿರಣ್, ಕುಮಾರ್, ಉಮೇಶ್ ಸೇರಿದಂತೆ ಹಲವರು ತಹಸೀಲ್ದಾರ್ಗೆ ಮನವಿ ನೀಡಿದರು.

 

Share this article

About Author

Madhu