Print this page

ಶಹರಿ ಉತ್ಸವ ಜಾಗೃತಿ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಉಪಾಧ್ಯಕ್ಷೆಗೆ ಆಹ್ವಾನ ನಿರಾಕರಣೆ ಸದಸ್ಯರ ಆಕ್ರೋಶ.

ಶಹರಿ ಉತ್ಸವ ಜಾಗೃತಿ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಉಪಾಧ್ಯಕ್ಷೆಗೆ ಆಹ್ವಾನ ನಿರಾಕರಣೆ ಸದಸ್ಯರ ಆಕ್ರೋಶ.ಮುಖ್ಯಾಧಿಕಾರಿ ಮತ್ತು ಶಹರಿ ರೋಜ್ಗಾರ್ ಯೋಜನಾಧಿಕಾರಿ ತರಾಟೆಗೆ.

ಕೃಷ್ಣರಾಜಪೇಟೆ: ಪಟ್ಟಣದಲ್ಲಿ ಶಹರಿ ರೋಜ್ ಗಾರ್ ಯೋಜನೆಯ ವತಿಯಿಂದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ "ಶಹರಿ ಉತ್ಸವ" ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.ಪುರಸಭೆಯ ಮುಖ್ಯಾಧಿಕಾರಿ ಮೂರ್ತಿ ಅವರು ಮಹಿಳೆಯರ ಕಾರ್ಯಕ್ರಮಕ್ಕೆ ಮಹಿಳಾ ಅಧ್ಯಕ್ಷ ಉಪಾಧ್ಯಕ್ಷರನ್ನು ಆಹ್ವಾನಿಸದೇ ಮನಸೋ ಇಚ್ಛೆ ಕಾರ್ಯಕ್ರಮ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಪ್ರಶ್ನೆ ಮಾಡಿದಾಗಲೂ ಉಡಾಫೆತನದಿಂದ ವರ್ತಿಸಿದ ಮೂರ್ತಿ ಮತ್ತು ಸ್ವರ್ಣಜಯಂತಿ ಯೋಜನೆಯ ಯೋಜನಾಧಿಕಾರಿ ನಾಗೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ಜಿಲ್ಲಾ ಸಂಯೋಜಕ ಯೋಗೇಶ್ ಕಾರ್ಯಕ್ರಮ ನಡೆಸುತ್ತಿರುವುದು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಈ ಕಾರ್ಯಕ್ಕೆ ಚುನಾಯಿತ ಜನಪ್ರತಿನಿಧಿಗಳನ್ನುಕರೆಯಬೇಕಾಗಿಲ್ಲ ಎಂದಾಗ ಕೆರಳಿದ ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಪುರಸಭೆ ಕಾರ್ಯಾಲಯದ ವತಿಯಿಂದ ನಡೆಯುತ್ತಿರುವ ಶಹರಿ ಉತ್ಸವ ಕಾರ್ಯಕ್ರಮದ ಆಯೋಜಕರು ಅಧ್ಯಕ್ಷೆ-ಉಪಾಧ್ಯಕ್ಷೆ ಮತ್ತು ಆಡಳಿತ ಮಂಡಳಿ. ಆದ್ದರಿಂದ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಜಾರಿಗೊಳಿಸಬೇಕು ಇಲ್ಲದಿದ್ದರೆ ನಿಮ್ಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಕೆ.ಟಿ.ಚಕ್ರಪಾಣಿ, ಕೆ.ಪುರುಷೋತ್ತಮ್, ಕೆ.ಬಿ.ನಂದೀಶ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಉತ್ಸಾಹದಿಂದ ಶಹರೀ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

Share this article

About Author

Madhu