Print this page

ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ.ಉತ್ತಮ ರಾಸುಗಳಿಗೆ ಚಿನ್ನ ಮತ್ತು ಬೆಳ್ಳಿ ನ್ಯಾಣಗಳ ಬಹುಮಾನ.

ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಭೃಗುಮಹರ್ಷಿಗಳ ತಪೋಭೂಮಿ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಭೃಗುಮಹರ್ಷಿಗಳ ತಪೋಭೂಮಿ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ರಾಜ್ಯಾದ್ಯಂತ ಭಕ್ತರು ಆಗಮಿಸಿದರು.ರಥೋತ್ಸವದ ಅಂಗವಾಗಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿ ಗೆ ಬೆಳಿಗ್ಗೆಯಿಂದಲೇ ಗಂಧದ ನೈವೇಧ್ಯ, ಹಾಲಿನ ಅಭಿಷೇಕ, ಅರಿಸಿನ ಕುಂಕುಮ ಅಭಿಷೇಕ ಸೇರಿದಂತೆ ಹಲವು ವಿಷೇಶ ಅಭಿಷೇಕಗಳನ್ನು ಮಾಡಿ ಹೋಮ ಹವನಗಳನ್ನು ನೆರವೇರಿದವು. ರಥೋತ್ಸವದ ಹಿನ್ನಲೆ ರಥವನ್ನು ವಿವಿಧ ಫಲಪುಷ್ಪಲಂಕಾರ, ತಳಿರು ತೋರಣಗಳಿಂದ ಅಲಂಕರಿಸಿಲಾಗಿತ್ತು.ಶಾಸಕ ನಾರಾಯಣಗೌಡ ಅವರ ಗೈರುಹಾಜರಿಯಲ್ಲಿ, ಶ್ರೀ ರಥದಲ್ಲಿ ವಿರಾಜಮಾನರಾಗಿ ಅಲಂಕೃತವಾಗಿದ್ದ ಶ್ರೀ ಕಲ್ಯಾಣವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ವಿಶೇಷ ಪೂಜೆ ಸಲ್ಲಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ದಂಪತಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದಿಂದ ಚಾಲನೆಗೊಂಡ ರಥೋತ್ಸವ ರಥ ಬೀದಿಯಲ್ಲಿ ಸಂಚರಿಸಿತು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹಣ್ಣು, ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು.ಉಘೇ ಗೋವಿಂದ... ಉಘೇ ವೆಂಕಟರಮಣ...ಉಘೇ ಗೋವಿಂದ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು.ನಂತರ ಮಧ್ಯಾಹ್ನ 4 ಗಂಟೆಗೆ ಎರಡನೇ ಬಾರಿಗೆ ರಥವನ್ನು ನೆರದಿದ್ದ ಭಕ್ತರು ಎಳೆದರು. ನಂತರ ರಥವು ಉತ್ಸವ ಮೂತರ್ಿಯೊಂದಿಗೆ ಸುಸೂತ್ರವಾಗಿ ಸ್ವಸ್ಥಾನಕ್ಕೆ ಮರುಳಿತು.ನೆರದಿದ್ದ ಸಾವಿರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಹರಕೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಮೊರೆಯಿಟ್ಟರು.ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ರಥೋತ್ಸವಕ್ಕೆ ಆಗಮಿಸಿ ತೇರಿಗೆ ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಮೆರೆದರು. ಹೇಮಗಿರಿಯಲ್ಲಿ ನಡೆಯುವ ರಥೋತ್ಸವದಲ್ಲಿ ನವ ದಂಪತಿಗಳು ಪಾಲ್ಗೋಂಡು ಹಣ್ಣು ದವನ ಎಸೆಯುವುದು ವಾಡಿಕೆ. ಹಾಗೇ ಮಾಡಿದರೇ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು.

ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು, ಸಮಾಜಸೇವಕರಾದ ಕೆ.ಎಸ್.ರಾಮೇಗೌಡ, ಶಬರಿಬುಕ್ ಹೌಸ್ ಮಾಲೀಕ ಕೆ.ವಿ.ರಾಮೇಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಪ್ರಧಾನ ಅರ್ಚಕ ರಾಮಭಟ್ಟ, ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಆನಂದೇಗೌಡ, , ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ, ಬಂಡಿಹೊಳೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಮಾಜಿಅಧ್ಯಕ್ಷ ಶೇಷಾಧ್ರಿ,ಕಾಯಿ ಮಂಜೇಗೌಡ ಸೇರಿದಂತೆ ಸೇರಿದಂತೆ ಹಲವು ಮುಖಂಡರ ಪೂಜೆಯಲ್ಲಿ ಪಾಳ್ಗೊಂಡಿದ್ದರು.

ಜಾತ್ರೆಯಲ್ಲಿ ತಮ್ಮ ಅತ್ಯುತ್ತಮವಾದ ರಾಸುಗಳೊಂದಿಗೆ ಆಗಮಿಸಿ ದನಗಳ ಜಾತ್ರೆಯ ಸೌಂದರ್ಯವು ಇಮ್ಮಡಿಗೊಳ್ಳುವಂತೆ ಮಾಡಿದ್ದ ರಾಸುಗಳ ಮಾಲೀಕರಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪ್ರಾಯೋಜಕತ್ವದಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ವಿತರಿಸಲಾಯಿತು.

 

Share this article

About Author

Madhu