Print this page

ಕೋರಮಂಡಲ್‌ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿ.ಜೆ.ರವಿ, ಉಪಾಧ್ಯಕ್ಷರಾಗಿ ಎಚ್.ಎಮ್ ಶಿವರಾಮ್ ಆಯ್ಕೆ.

ಕೋರಮಂಡಲ್‌ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿ.ಜೆ.ರವಿ, ಉಪಾಧ್ಯಕ್ಷರಾಗಿ ಎಚ್.ಎಮ್ ಶಿವರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆ.ಆರ್.ಪೇಟೆ:  ತಾಲೂಕಿನ ಕೋರಮಂಡಲ್‌ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಧ  ಈ ಹಿಂದಿನ ಆಡಳಿತ ಮಂಡಳಿ ಅಧಿಕಾರಾವಧಿ ಮುಗಿದ ಬಳಿಕ‌ ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ನಿರ್ದೇಶಕರನ್ನು ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾಗಿರುವ ವಿ.ಜೆ ರವಿ ಅಧ್ಯಕ್ಷ ಸ್ಥಾನಕ್ಕೆ, ಮುಖ್ಯ ಇಂಜಿನಿಯರ್ ಎಚ್.ಎಮ್‌ ಶಿವರಾಮ್ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ವಿ.ಜೆ.ರವಿ ಅವರನ್ನು ಅಧ್ಯಕ್ಷರಾಗಿ, ಎಚ್.ಎಮ್ ಶಿವರಾಮ್ ರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಘೋಷಿಸಿದ್ದಾರೆ.ನಿರ್ದೇಶಕರಾದ ಕಬ್ಬು ವಿಭಾಗದ ಮುಖ್ಯಸ್ಥ ಬಾಬುರಾಜು, ಕಬ್ಬು ಸಾಗಾಣಿಕೆ ವಾಹನಗಳ ನಿಯಂತ್ರಣಾಧಿಕಾರಿ ಮಾಕವಳ್ಳಿ ಪುಟ್ಟೇಗೌಡ, ಎಚ್.ಆರ್.ಮಂಜುನಾಥ್, ಕೆಮಿಷ್ಟ್ ನಾಗರಾಜು ಸೇರಿದಂತೆ ಎಲ್ಲಾ ನಿರ್ದೇಶಕರು , ಕಾರ್ಖಾನೆಯ ನೌಕರರ ವರ್ಗ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

Share this article

About Author

Madhu