Print this page

ಶ್ರಿ ಸಿದ್ದಗಂಗ ಶ್ರೀಗಳ ಪುಣ್ಯ ಸ್ಮರಣೆ ಮತ್ತು ಮೃತ ಯೋಧ ರಿಗೆ ಭಾವ ಪೂರ್ಣಶ್ರದ್ಧಾಂಜಲಿ

ಅಪ್ಪನಹಳ್ಳಿ ಗ್ರಾಮದ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ.ಶ್ರೀ ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ ಹಾಗೂ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ.

ಕೆ.ಆರ್.ಪೇಟೆ:ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿ ಗ್ರಾಮದ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ನಡೆದಾಡುವ ದೇವರು ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ ಹಾಗೂ ಕರ್ನಾಟದ ಒಬ್ಬ ಯೋಧ ಸೇರಿ 42 ಜನ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ಶ್ರೀಗಳ ಭಾವಚಿತ್ರ ಹಾಗೂ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಕಾಲೋನಿಯ ಗುಡಗೇರಿಯ ಗುರು(33)ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಗ್ರರ ದಾಳಿಯಿಂದ ವೀರಮರಣವನ್ನಪ್ಪಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿ.ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಯಶವಂತ್ ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಪಾಪಿ ಪಾಕಿಸ್ತಾನದ ಕೆಟ್ಟ ಕೃತ್ಯವನ್ನು ಖಂಡಿಸಿ ಭಾರತ ಸರ್ಕಾರವು ಉಗ್ರರ ಸಂಹಾರಕ್ಕೆ ಮುಂದಾಗುವ ಮೂಲಕ ಜಮ್ಮುಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ನಂತರ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು

 ಕಾರ್ಯಕ್ರಮ ದಲ್ಲಿ ಸಂಘದ ಅಧ್ಯಕ್ಷ ಯಶವಂತ್ .ಲಕ್ಷ್ಮೀಷ್, ಶಿವರಾಜು. ನವೀನ್ .ವಿನಯ್. ಮಂಜು .ನಾಗೇಶ್. ರವಿ. ಪಾಪಣ್ಣ. ಸತ್ಯಣ್ಣ. ಹಾಗೂ ಅಪ್ಪನಹಳ್ಳಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು

Share this article

About Author

Madhu