Print this page

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ.

ಜ್ಞಾನದ ವಿಕಾಸವೆ ವಿಜ್ಞಾನ ಮತ್ತು ತಂತ್ರಜ್ಞಾನ. ನೂತನ ಆವಿಷ್ಕಾರಗಳಿಗೆ ತೆರೆದುಕೊಳ್ಳುವ ವಿಶಾಲ ಭೂಮಿಕೆ ಜ್ಞಾನ ಮತ್ತು ತಂತ್ರಜ್ಞಾನದಲ್ಲಿದೆ. ಆದ್ದರಿಂದ ಪ್ರತಿತೊಬ್ಬರೂ ಕೂಡಾ ವಿಜ್ಞಾನದ ಜೊತೆಯಾಗಿ ನಿಲ್ಲಬೇಕು ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಂಪತ್ಕುಮಾರನ್ ಹೇಳಿದರು.

ಕೆ.ಆರ್.ಪೇಟೆ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಭಾರತ ದೇಶವು ಅತ್ಯಂತ ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಹೊಂದಿದೆ. ಇಡಿ ಜಗತ್ತು ಇಂದು ಭಾರತೀಯ ವಿಜ್ಞಾನಿಗಳ ಸಹಕಾರಕ್ಕಾಗಿ ತುದಿಗಾಲ ಮೇಲೆ ನಿಂತಿದೆ. ಭರತೀಯ ತಂತ್ರಜ್ಞಾನದ ಮೂಲಬೇರುಗಳು ವಿಜ್ಞಾನದ ವಿಕಾಸದಲ್ಲಿದೆ. ಇಂದು ದೇಶವು ಸಂದಿಗ್ಧತೆಯಲ್ಲಿದೆ. ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಯುವಕರು ಹೆಚ್ಚು ವಿಜ್ಞಾನಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಜನರಿಗಾಗಿ ವಿಜ್ಞಾನ-ವಿಜ್ಞಾನಕ್ಕಾಗಿ ಜನರು ಎಂಬ ಸತ್ಯವನ್ನು ಮನಗಾಣಬೇಕು ಎಂದು ಸಂಪತ್ಕುಮಾರನ್ ಕಿವಿಮಾತು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಡ್ಯ ಬಾಲಕರ ಸರಕಾರಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಕುಮಾರಸ್ವಾಮಿ ಮಾತನಾಡಿ ಇಡಿ ಜಗತ್ತಿಗೆ ಭಾರತ ದೇಶಧಲ್ಲಿನ ವಿಜ್ಞಾನದ ಆವಿಷ್ಕಾರವನ್ನು ತೋರಿಸಿಕೊಟ್ಟವರು ಸರ್.ಸಿ.ವಿ.ರಾಮನ್. ರಾಮನ್ ಅವರ ಆವಿಷ್ಕಾರವು ಇಂದು ವಿಜ್ಞಾನ ಕ್ಷೆತ್ರದಲ್ಲಿ ರಾಮನ್ ಎಫೆಕ್ಟ್ ಎಂದೆ ಖ್ಯಾತಿಯಾಗಿದೆ. ಬೆಳಕಿನ ಚಮತ್ಕಾರದಿಂದ ಸಾಧಿಸಬಹುದಾದ ಮಹತ್ಕಾರ್ಯಗಳನ್ನು ಜಗತ್ತಿಗೆ ತೋರಿಸಿಕೊಡುವ ಮೂಲಕ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತಕ್ಕಷ್ಟೆ ಅಲ್ಲದೆ ಏಷ್ಯಾಖಂಡಕ್ಕೆ ಮೊದಲಿಗರಾಗಿ ಕೀತರ್ಿಯನ್ನು ತಂದಿದ್ದಾರೆ. ಆದ್ದರಿಂದಲೆ ಫೆಬ್ರವರಿ 28ರಂದು ರಾಮನ್ ಎಫೆಕ್ಟ್ ಜಗತ್ತಿಗೆ ತೋರಿಸಿದ್ದರಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ನಮ್ಮ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಹೊಸಹೊಸ ಸಂಶೋಧನೆಗಳು ನಡೆಯುವ ಮೂಲಕ ಪ್ರಪಂಚವೆ ಗುರುತಿಸುವಂತಹ ಸಾಧನೆಯನ್ನು ಮಾಡಿದರೂ ಕೂಡಾ ಸರ್ ಸಿ.ವಿ.ರಾಮನ್ ಅವರನ್ನು ಹೊರತುಪಡಿಸಿ ಇದುವರೆವಿಗೂ ಬೇರೆ ಯಾರಿಗೂ ನೊಬೆಲ್ ಪ್ರಶಸ್ತಿಯು ದೊರಕಿಲ್ಲ. ಹಾಗೆಂದು ನಾವು ಸಾಧನೆಯನ್ನು ಮಾಡಿಲ್ಲವೆಂದಲ್ಲ. ಸಾಧನೆಯು ಅಪಾರವಾಗಿದೆ. ಮುಂದೊಂದು ದಿನ ಮತ್ತೊಮ್ಮೆ ಭಾರತಕ್ಕೆ ನೊಬೆಲ್ ಪ್ರಶಸ್ತಿಯು ಹುಡುಕಿಕೊಂಡು ಬರುತ್ತದೆ ಎಂಬ ವಿಶ್ವಾಸವಿದೆ. ಯುವಕರು ಹೆಚ್ಚಿನ ಆಸಕ್ತಿಯನ್ನು ವಿಜ್ಞಾನದ ಕಲಿಕೆಗೆ ತೋರಿಸಬೇಕು ಎಂದು ಡಾ.ಶಿವಕುಮಾರಸ್ವಾಮಿ ಒತ್ತಾಯಿಸಿದರು.


ಸಹಾಯಕ ಪ್ರಾಧ್ಯಾಪಕ ಡಾ.ರಾಜೀವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆಂಪಯ್ಯ ರಸಪ್ರಸ್ನೆ ವಿಜೇತ ವಿದ್ಯಾತರ್ಿಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಬೆಂಗಳೂರಿನ ಪ್ರೆಸಿಡೆನ್ಸಿಯಲ್ ಯೂನಿವಸರ್ಿಟಿ ಪ್ರಾಧ್ಯಾಪಕ ನ್ಯಾನೋ ತಂತ್ರಜ್ಞಾನದ ಬಗೆಗೆ ಉಪನ್ಯಾಸವನ್ನು ನೀಡಿದರೆ ಮಂಡ್ಯ ಸರಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶಿವಲಿಂಗಸ್ವಾಮಿ ಗುರುತ್ವ ಅಲೆಗಳನ್ನು ಕುರಿತು ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕ ಎಂ.ಕೆ.ರಮೇಶ್, ಅಧೀಕ್ಷಕ ಬಿ.ಎ.ಮಂಜುನಾಥ್ ಸೇರಿದಂತೆ ವಿಜ್ಞಾನ ವಿಭಾಗದ ಉಪಸ್ಥಿತರಿದ್ದರು.

Share this article

About Author

Madhu