Print this page

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾ.ಪಂ ಹಂತದಲ್ಲಿ ಬೋಧಕರ ತರಬೇತಿ ಕಾರ್ಯಕ್ರಮ.

 ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ಆದೇಶದ ಮೇರೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಗ್ರಾಮ ಲೋಕ ಶಿಕ್ಷಣ ಸಮಿತಿ ಬೀರವಳ್ಳಿ. ಅಕ್ಕಿಹೆಬ್ಬಾಳು. ಆಲಂಬಾಡಿ ಕಾವಲ್ ಶೀಳನೆರೆ ಗ್ರಾ.ಪಂ ಹಂತದಲ್ಲಿ ಬೋಧಕರ ತರಬೇತಿ ಕಾರ್ಯಕ್ರಮ ನಡೆಯಿತು.

ಕೆ.ಆರ್.ಪೇಟೆ: ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಸಂಯೋಜಕ ಮರುವನಹಳ್ಳಿ ಬಸವರಾಜು ನಮ್ಮ ತಾಲ್ಲೂಕಿನಲ್ಲಿ 2011ರ ಜನಗಣತಿಯಂತೆ 27829 ಜನ ಅನಕ್ಷರಸ್ಥರು ಇದ್ದು , ಇದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಎಲ್ಲಾ ಬೋಧಕರು ತಮ್ಮ ತಮ್ಮ ವ್ಯಾಪ್ತಿಯ ಅನಕ್ಷರಸ್ಥರ ಬಾಳಿಗೆ ಅಕ್ಷರ ಕಲಿಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು ಆ ಮೂಲಕ ಸಂಪೂರ್ಣ ಸಾಕ್ಷರತೆಯ ಪಂಚಾಯತಿಯನ್ನಾಗಿ ಘೋಷಣೆ ಮಾಡಲು ಕಟಿಬದ್ದರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಮಾತನಾಡಿ ನಿಮಗೆ ಗುರುಗಳ ಗುರುಮಾತೆಯ ಸ್ಥಾನ ನೀಡಲಾಗಿದ್ದು ಅನಕ್ಷರಸ್ಥರ ಮನವೊಲಿಸಿ ಅವರ ಬಿಡುವಿನ ವೇಳೆಯಲ್ಲಿ ಅವರಿಗೆ ಕಲಿಸುವುದರ ಮೂಲಕ ಹೆಬ್ಬೆಟ್ಟಿನ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು ತಾವುಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸ್ವಯಂ ಸೇವಕರಾಗಿಅಕ್ಷರ ಕಲಿಸುವ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪುಣ್ಯದ ಕೆಲಸ ಮಾಡಬೇಕು. ಇದೇ ನೀವು ಉತ್ತಮ ಸಮಾಜಕ್ಕೆ ನೀಡುವ ಕೊಡುಗೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಡಿಓಗಳಾದ ಬೀರವಳ್ಳಿ ಅರವಿಂದ್.ಅಕ್ಕಿಹೆಬ್ಬಾಳು ಪಿಡಿಓ.ರವಿಕುಮಾರ್. ಆಲಂಬಾಡಿ ಪಿಡಿಓ ರವಿ. ಪ್ರೇರಕರಾದ ರವಿಕುಮಾರ್. ಕಾವ್ಯ. ತೇಜಸ್ವಿನಿ.ಆಶಾ.ಹೇಮಾ.ಭಾರತಿ.ಸಿ.ಆರ್.ಪಿ.ಲೋಕೇಶ್. ಮುಖ್ಯಶಿಕ್ಷಕರಾದ ಗೋವಿಂದರಾಜು.ಕುಮಾರಸ್ವಾಮಿ. ರವಿ.ಸಂಪನ್ಮೂಲ ಶಿಕ್ಷಕರಾದ ಜಿ.ಎಸ್.ಮಂಜು.ಜೆ.ವಿ.ರಾಮಚಂದ್ರ.ರಾಘವೇಂದ್ರ. ಹೆಚ್.ಎಸ್.ನಾರಾಯಣ. ರಾಜೇಶ್ ಎಸ್.ಬಿ. ಹಾಗೂ ಬೋಧಕರು ಗಳು ಹಾಜರಿದ್ದರು.

Share this article

About Author

Madhu