Print this page

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ.

ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಮಳವಳ್ಳಿಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಆಚರಿಸಲಾಯಿತು.

ಮಳವಳ್ಳಿ:  ಮಳವಳ್ಳಿ ಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ  ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಚಂದ್ರಮೋಹನ್ ರವರು ಮಾತನಾಡಿ ಜಂತುಹುಳು ಮನುಷ್ಯನನ್ನು ಹೇಗೆ ಕಾಡುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಇನ್ನೂ ತಾಲ್ಲೂಕು ವೈದ್ಯಾಧಿಕಾರಿ  ಡಾ.ವೀರಭದ್ರಪ್ಪ ಮಾತನಾಡಿ , ಸಣ್ಣ ಮಕ್ಕಳಿಂದ 19 ವರ್ಷದೊಳಗೆ ಮಕ್ಕಳಿಗೆ  ಜಂತುಹುಳು ನಿವಾರಣೆ ಗೆ ವರ್ಷಕ್ಕೆ ಎರಡು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅದಕ್ಕಾಗಿ ದೇಶವ್ಯಾಪ್ತಿ ಫೆಬ್ರವರಿ ಹಾಗೂ ಆಕ್ಟೋಬರ್ ತಿಂಗಳನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಸಲಾಗುತ್ತಿದೆ.  ಈ ಹಿಂದೆ ಬಯಲು ಶೌಚಾಲಯ ದಿಂದ ಜಂತುಹಳು ಮನುಷ್ಯನನ್ನು ಬೇಗ ಅವರಿಸಿಕೊಳ್ಳುತ್ತಿತ್ತು. ಇಂದಿನಿಂದ ಆರು ದಿನಗಳ ಕಾಲ ಈ  ಜಂತುಹುಳು ನಿವಾರಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳುತ್ತದೆ ತಾಲ್ಲೂಕಿನ ಎಲ್ಲಾ  ಶಾಲಾ ಕಾಲೇಜುಗಳಿಗೆ ತೆರಳಿ ಮಾತ್ರೆಗಳನ್ನು ಉಚಿತವಾಗಿ ನೀಡುತ್ತವೆ  ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ  ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣಾಧಿಕಾರಿ ವೀರಣ್ಣಗೌಡ ,ಕಾಲೇಜ ಸಿಬ್ಬಂದಿ ಮತ್ತು ಮಕ್ಕಳು ಸೇರಿದಂತೆ ಮತ್ತಿತ್ತರು ಹಾಜರಿದ್ದರು.

 

Share this article

About Author

Madhu