Print this page

ನಿಯಂತ್ರಣಾ ತಪ್ಪಿ ಬೈಕಿನಿಂದ ಬಿದ್ದು ಲೈನ್ ಮ್ಯಾನ್ ಸ್ಥಳದಲ್ಲೇ ಸಾವು.

ರಂಗನಾಥಪುರ ಗೇಟ್ ಬಳಿ ನಿಯಂತ್ರಣಾ ತಪ್ಪಿ ಬೈಕಿನಿಂದ ಬಿದ್ದು ಲೈನ್ ಮ್ಯಾನ್  ಅಭಿಷೇಕ್(25) ಸ್ಥಳದಲ್ಲೇ ಸಾವು.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ರಂಗನಾಥಪುರ ಗೇಟ್ ನ ಬಳಿ ಬೈಕಿನಿಂದ ಆಯತಪ್ಪಿಬಿದ್ದು ಸೆಸ್ಕ್ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವು.ಶೀಳನೆರೆ ಸೆಕ್ಷನ್ ಜೂನಿಯರ್ ಲೈನ್ ಮೈನ್  ಕೆಲಸ ಮಾಡುತ್ತಿರುವ ಅಭಿಷೇಕ್(25) ಮೃತ ದುರ್ದೈವಿಯಾಗಿದ್ದಾನೆ.ಬೂಕನಕೆರೆ ಗ್ರಾಮದ ನಿವಾಸಿಯಾಗಿರುವ ಅಭಿಷೇಕ್ ಕೆ.ಆರ್.ಪೇಟೆ ಪಟ್ಟಣದಲ್ಲಿ ಸ್ನೇಹಿತನ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಬರುವಾಗ ರಂಗನಾಥಪುರ ಗೇಟಿನಲ್ಲಿರುವ ರಸ್ತೆ ಉಬ್ಬಿನ ಬಳಿ ಬೈಕಿನಿಂದ ಆಯತಪ್ಪಿ ಕೆಳಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ. ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಎನ್.ಗಿರೀಶ್ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತನ ಬಂಧುಗಳ ಆಕ್ರಂದನವು ಮುಗಿಲು ಮುಟ್ಟಿತ್ತು.

 

Share this article

About Author

Madhu