Print this page

ಸಿದ್ದಮ್ಮ ಎಂಬ ಬಡವರ ಮನೆಯಲ್ಲಿ ವಾಸ್ತವ್ಯ ಹೂಡಿದ ಶಾಸಕ ಡಾ.ಅನ್ನದಾನಿ.

 ಗ್ರಾಮ ವಾಸ್ತವ್ಯ ಹೂಡುವುದರಿಂದ  ಜನರ ನಿಜಜೀವನ ಕಷ್ಟಸುಖಗಳನ್ನು ಹತ್ತಿರದಿಂದ ನೋಡುವುದಕ್ಕಾಗಿ ಮಾಡುತ್ತಿದ್ದೇನೆ ಬುಟಾಟಿಕೆಯಿಂದಲ್ಲ ಎಂದು ಶಾಸಕ ಡಾ.ಅನ್ನದಾನಿ ತಿಳಿಸಿದರು. 

ಮಳವಳ್ಳಿ: ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ಸಿದ್ದಮ್ಮ ಎಂಬು ಬಡವರ ಮನೆಯಲ್ಲಿ ವಾಸ್ತವ್ಯ ಹೂಡಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಡಾ.ಅನ್ನದಾನಿ  ಇದುವರೆಗೂ ನಾನು ಶಾಸಕನಾದ ನಂತರ ನಾಲ್ಕು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು  ಬೀದಿಬೀದಿಗಳ ಜನರ ಕಷ್ಟಗಳನ್ನು ತಿಳಿಯಬಹುದು,  ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿರವರು ತಾಯಿ ಹೃದಯ ವುಳ್ಳವರು ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದವರು ತಮ್ಮ ಸಹೋದರರಂತೆ ಕಾಣುತ್ತಾರೆ.  ಕಾಂಗ್ರೆಸ್ ರವರು ಸೇರಿ ಸಂಮಿಶ್ರ ಸರ್ಕಾರವನ್ನು ರಚಿಸಿದ್ದಾರೆ ಎಂದರು.  ಸಿದ್ದರಾಮಯ್ಯರವರು ಮುಂದಿನ ಮುಖ್ಯ ಮಂತ್ರಿಯಾಗುವ ಹೇಳಿಕೆಗೆ ಬಗ್ಗೆ ಕೇಳಿದ  ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಈಗಾಗಲೇ ರಾಹುಲ್ ಗಾಂಧಿರವರು  ಮುಂದಿನ 5 ವರ್ಷಗಳ ಕಾಲ ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ  ಸಿದ್ದರಾಮಯ್ಯ ಹೇಳಿಕೆಗೆ ಉತ್ತರ ಕೊಡುವ ಮಟ್ಟಕ್ಕೆ ನಾನು ಬೆಳೆದಿಲ್ಲ , ಅವರಿಗೆ ಮೇಲೆಮಟ್ಟದ ನಾಯಕರಾದ ದೇವೇಗೌಡಜೀ, ಕುಮಾರಣ್ಣ ಉತ್ತರ ನೀಡುತ್ತಾರೆ. ಸಮನ್ವಯ ಸಮಿತಿಯಲ್ಲಿ  ಮೂಡಿದರೆ ಎಂಬ ಪ್ರಶ್ನೆಗೆ ಸಮನ್ವಯ ಸಮಿತಿಯಲ್ಲಿ ಎರಡು ಪಕ್ಷದವರು ಇದ್ದಾರೆ ಎಂದಷ್ಟೇ ಹೇಳಿದರು.  ನಾಲೆಗಳಿಗೆ ನೀರು ಬಿಟ್ಟಿಲ್ಲ ಎಂಬ ಮಾತು ಕೇಳು ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಸಮಸ್ಯೆಗಳನ್ನು ತಿಳಿದುಕೊಳ್ಳಲು  ಈ ಗ್ರಾಮ ವಾಸ್ತವ್ಯ  ಕೆಲವರು ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಬರುತ್ತಾರೆ. ನಾನು ಗೆದ್ದ ನಂತರ ಪ್ರತಿ ಗ್ರಾಮಗಳಿಗೂ ತೆರಳಿ ನಮ್ಮ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಸಾಧ್ಯವಾದರೆ ಸ್ಥಳದಲ್ಲಿಯೇ ಬಗೆಹರಿಸಲು ಅಧಿಕಾರಗಳ ತಂಡವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದರು .    

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಟೇಶ್, ಮಾಜಿ ಸದಸ್ಯ ಪ್ರಕಾಶ್, ಜಯರಾಜು, ಕೃಷ್ಣಮೂರ್ತಿ, ಶೇಖರ್, ಹೂವಿನಕೊಪ್ಪಲು ಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.

 

Share this article

About Author

Madhu