Print this page

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಭಾರತ್ ಬಂದ್!

ಭಾರತ್ ಬಂದ್ ಹಿನ್ನೆಲೆಯಲ್ಲಿ  ಮಳವಳ್ಳಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್, ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ .

ಮಳವಳ್ಳಿ:   ಕೇಂದ್ರ ಸರ್ಕಾರದ ವಿರುದ್ದ ಇಂದು ಭಾರತ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ. ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ   ಮಳವಳ್ಳಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಾಲ್ಲೂಕು ಪಂಚಾಯಿತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ  ಬೈಕ್ ಜಾಥ ನಡೆಸಿ ನಂತರ ಅನಂತರಾಂ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರವಿರುದ್ದ ಘೋಷಣೆ ಕೂಗಿದರು ನಂತರ. ಮಾಜಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ ಈ ಹಿಂದೆ ಯುಪಿಎ ಸರ್ಕಾರ ವಿದ್ದಾಗ ಇದೇ ಬಿಜೆಪಿ ಪಕ್ಷ  ನಮ್ಮ ಕಾಂಗ್ರೆಸ್ ಪಕ್ಷ ದ ವಿರುದ್ದ ಹರಿಹಾಯ್ದದಿದ್ದರು ಆಗ ತೈಲ ಉತ್ಪನ್ನ ಬೆಲೆಏರಿಕೆ ಹೆಚ್ಚಾಗಿತ್ತು ಆದರೆ ಈಗ. ಕಡಿಮೆ ಇದ್ದರೂ ಪೆಟ್ರೋಲ್ ಡಿಸೇಲ್ ದರ ಗಗನಕ್ಕೆ ಏರಿಕೆ ಮಾಡಿದೆ ಎಂದು ಆರೋಪಿಸಿದರು.ಮುಂದಿನ ದಿನಗಳಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ  ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಿಜೆಪಿಪಕ್ಷದ ವಿರುದ್ಧ.  ಹೋರಾಟ ನಡೆಸುವುದಾಗಿ ತಿಳಿಸಿದರು. 

ಪ್ರತಿಭಟನೆಯಲ್ಲಿ  ತಾ.ಪಂ ಅಧ್ಯಕ್ಷ.  ವಿಶ್ವಾಸ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಪುಟ್ಟರಾಮು, ಜಿ.ಪಂ ಸದಸ್ಯರಾದ ಹನುಮಂತ, ಚಂದ್ರಕುಮಾರ, ಸುಜಾತಸುಂದೃಪ್ಪ, ಸುಷ್ಮಾರಾಜು, ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

Share this article

About Author

Madhu