Print this page

ಗೃಹಿಣಿಯೊಬ್ಬರು ಕ್ರಿಮಿನಾಶಕ ವಿಷದ ಮಾತ್ರೆಯನ್ನು ನುಂಗಿ ಆತ್ಮಹತ್ಯೆ.

ವಳಗೆರೆಮೆಣಸ ಗ್ರಾಮದಲ್ಲಿ ಗೃಹಿಣಿಯೊಬ್ಬರು ಕ್ರಿಮಿನಾಶಕ ವಿಷದ ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದ್ದೆ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಗೃಹಿಣಿಯೊಬ್ಬರು ಕ್ರಿಮಿನಾಶಕ ವಿಷದ ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದ್ದೆ ಮೃತಪಟ್ಟಿದ್ದಾರೆ.ಗ್ರಾಮದ ಲೋಕೇಶ್ ಎಂಬುವರ ಪತ್ನಿ ಹರ್ಷಿತಾ (22) ವಿಷದ ಕಾಳು ನುಂಗಿ ಆತ್ಮಹತ್ಯೆಗೆ ಶರಣಾದವರು.ಲೋಕೇಶ್ನಿಗೆ ತಾಲೂಕಿನ ಮರಡಹಳ್ಳಿ ಗ್ರಾಮದಿಂದ ಹರ್ಷಿತಾರನ್ನು ಕಳೆದ ಮೂರು ವರ್ಷದ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ದಂಪತಿಗೆ 1 ವರ್ಷದ ಹೆಣ್ಣುಮಗು ಕೂಡ ಇತ್ತು.ಹರ್ಷಿತಾ ಭಾನುವಾರ ಗಣೇಶನ ಹಬ್ಬಕ್ಕೆ ಬಟ್ಟೆ ತರಲು ಪಟ್ಟಣಕ್ಕೆ ಬಂದಿದ್ದರು. ಬಟ್ಟೆ ತೆಗೆದುಕೊಂಡು, ಜತೆಯಲ್ಲಿ ಕಾಳಿನ ಮಾತ್ರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಂಜೆ ಮಾತ್ರೆಯನ್ನು ನುಂಗಿ, ನೀರನ್ನು ಕುಡಿದ ಮೇಲೆ. ಆರೋಗ್ಯದಲ್ಲಿ ಕೊಂಚ ಬದಲಾವಣೆ ಆದಾಗ ವಿಷ ತೆಗೆದುಕೊಂಡಿರುವ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿ, ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೊಲಂಬಿಯಾ ಏಷಿಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸ್ವಲ್ಪ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡಿದೆ. ಹೆಣ್ಣು ಮಗುವಿನ ಹೆಸರಿಗೆ 2 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಹಿಡುವುದು. ಅರ್ಧ ಎಕರೆ ತೋಟವನ್ನು ಮಗುವಿಗೆ ಕೊಡುವುದು ಎಂದು ತೀರ್ಮಾನ ಮಾಡಿ ಪ್ರಕರಣವನ್ನು ಸುಖಾಂತ್ಯ ಮಾಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

Share this article

About Author

Madhu