ಕೃಷಿ ಅಭಿಯಾನ ಅನುಷ್ಠಾನ ಸಮಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ 2018 ಸಂಚಾರಿ ಮಾಹಿತಿಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಚಾರಿ ಮಾಹಿತಿ ಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿ ನಂತರ ಮಾತನಾಡಿ, ರೈತರು ಬೆಳೆಯುವ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಮುಖ್ಯಮಂತ್ರಿ ಕುಮಾರಣ್ಣ ರವರು ರೈತರ ಬಗ್ಗೆ ಅಪಾರ ಕಾಳಜಿವಿದ್ದು, ರೈತರಿಗಾಗಿ ಹಲವು ಯೋಜನೆಗಳನ್ನು ತರಲು ಹೊರಟಿದ್ದಾರೆ. ಈಗಾಗಲೇ ಕೃಷಿ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ತಲುಪಬೇಕು ಈ ನಿಟ್ಟಿನಲ್ಲಿ ರಥವನ್ನು ಗ್ರಾಮಗಳಿಗೆ ಬೇಟಿ ಕೃಷಿ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅರಿವು ಮೂಡಿಸಲಾಗುವುದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ಮಕ್ಕಳು ಕಳಸ ಹೊತ್ತು ಮೆರವಣಿಗೆ ಹಾಗೂ ಪೂಜಾ ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು ಇದು ಪಟ್ಟಣದ ಮೂಲಕ ಬುಗತಹಳ್ಳಿ,ಟಿ ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು ಮೂಲಕ ಮಾರೇಹಳ್ಳಿ, ವಾಸ್ತವ್ಯ ಹೂಡಲಿದೆ. ಈ ಬಾರಿ ಕಸಭಾ ರೈತರಿಗೆ ಎರಡು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ 8 ರಂದು ಎಪಿಎಂಸಿ ಆವರಣ ಹೋಬಳಿ ಮಟ್ಟದ ವೇದಿಕೆ ಕಾರ್ಯಕ್ರಮ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಲಾಗುವುದು ತಾಲ್ಲೂಕಿನ ಎಲ್ಲಾ ರೈತರು ಆಗಮಿಸುವಂತೆ ಶಾಸಕರು ಮನವಿಮಾಡಿಕೊಂಡರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ಎನ್ ವಿಶ್ವಾಸ್, ಸದಸ್ಯ ನಟೇಶ್, ಜಿ.ಪಂ ಸದಸ್ಯ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರವಿ, ತಹಸೀಲ್ದಾರ್ ದಿನೇಶ್ ಚಂದ್, ತಾಲ್ಲೂಕು ಪಂಚಾಯಿತಿ ಇಒ ಸತೀಶ್ ,ಕೃಷಿ ಸಹಾಯ ನಿರ್ದೇಶಕ ಪರಮೇಶ್, ಅಧಿಕಾರಿ ರಮೇಶ್, ಸೇರಿದಂತೆ ಮತ್ತಿತ್ತರರು ಇದ್ದರು.