ಶಾಸಕ ಡಾ.ಕೆ ಅನ್ನದಾನಿರವರು ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸವನ್ನು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪಿಡಿಒಗಳು ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸವನ್ನು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಾ.ಕೆ ಅನ್ನದಾನಿ ರವರು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು. ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಕೆ ಅನ್ನದಾನಿ ಅಧ್ಯಕ್ಷತೆಯಲ್ಲಿ ಪಿಡಿಒ ಗಳ ಸಭೆ ಕರೆದು ಮಾತನಾಡಿ , ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಚತೆ ಇಲ್ಲದೆ ಚರಂಡಿಗಳು ಗಬ್ಬುನಾರುತ್ತಿದೆ. ಏಕೆ ಉದಾಸೀನಾ ನಿಮಗೆ ಇದು ಕೊನೆ ಎಚ್ಚರಿಕೆ ,ಇನ್ನೂ ಮುಂದೆ ಸಾರ್ವಜನಿಕ ರಿಂದ ಯಾವುದೇ ತೊಂದರೆಯಾದರೆ ಕೂಡಲೇ ಕ್ರಮಕೈಗೊಳ್ಳುತ್ತೇನೆ , ಸಾರ್ವಜನಿಕರನ್ನು ಏಕೆ ಅಲೆಸುತ್ತೀರಾ, ನಿಮ್ಮ ಕೈಯಲ್ಲಿ ಕೆಲಸವಾಗಿದ್ದರೆ ಅದನ್ನು ತಿಳಿಸಿ, ಇನ್ನೂ ಮುಂದೆ ಈ ರೀತಿ ನಡೆಯಬಾರದು ಎಂದು ಎಚ್ಚರಿಸಿದರು. ನಿಮ್ಮ ಸಮಸ್ಯೆ ಇದ್ದರೆ ನನಗೆ ತಿಳಿಸಿ ಎಂದರು. ಇದಕ್ಕೂ ಉತ್ತರಿಸಿದ ಪಿಡಿಒ ಸಂಘದ ಅಧ್ಯಕ್ಷ ರುದ್ರಯ್ಯ ಮಾತನಾಡಿ, ನಾವು ಚರಂಡಿಗಳ ಸ್ವಚ್ಚತಾ ಮಾಡಿಸುತ್ತಿದ್ದೇವೆ. ಇದಲ್ಲದೆ ಚರಂಡಿ ಮಾಡಲು ಸರಿಯಾಗಿ ಎಂ ಸೆಂಡ್ ಸರಜರಾಜುಯಾಗುತ್ತಿಲ್ಲ, ಎಂದು ದೂರಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಾಹಣಾಧಿಕಾರಿ ಸತೀಸ್ ಹಾಗೂ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಪಿಡಿಒಗಳು ಹಾಜರಿದ್ದರು