Print this page

ಹಾಲು ಉತ್ಪಾದಕರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮನ್ ಮುಲ್ ಕಚೇರಿ ಮುಂದೆ ಪ್ರತಿಭಟನೆ.

ವಿವಿದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹಾಲು ಉತ್ಪಾದಕರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮಳವಳ್ಳಿ ಪಟ್ಟಣದ ಮನ್ ಮುಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. 

ಮಳವಳ್ಳಿ: ವಿವಿದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹಾಲು ಉತ್ಪಾದಕರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮಳವಳ್ಳಿ ಪಟ್ಟಣದ ಮನ್ ಮುಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ  ಎನ್.ಎಲ್ ಭರತ್ ರಾಜ್ ನೇತೃತ್ವದಲ್ಲಿ  ಪಟ್ಟಣದ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಮನ್ ಮುಲ್ ವಿರುದ್ದ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖಬೀದಿಗಳ ಮೂಲಕ ಮನ್ ಮುಲ್ ಉಪಕಚೇರಿ ಮುಂದೆ  ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ  ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್ ಭರತ್ ರಾಜ್ ಮಾತನಾಡಿ, ಪ್ರತಿ ಲೀಟರ್ ಹಾಲಿಗೆ 50 ರೂ ನೀಡಬೇಕು, ಇದಲ್ಲದೆ ಎರಡು ಸರ್ಕಾರಗಳು ತಲಾ 10 ರೂ ಸಬ್ಸಿಡಿ ನೀಡಬೇಕು , ಜೊತೆಗೆ  5 ರೂ ಪ್ರೋತ್ಸಾಹ ಧನವನ್ನು ನೀಡಬೇಕು  ಎಂದು ಒತ್ತಾಯಿಸಿದರು.  ಮನ್ ಮುಲ್  ಒಕ್ಕೂಟದಲ್ಲಿ ರುವ ಆಡಳಿತ ಮಂಡಳಿಯು ಪಕ್ಷಾತೀತವಾಗಿ ಲೂಟಿ ಮಾಡುತ್ತಿದ್ದಾರೆ, ಹಾಲು ಉತ್ಪಾದಕ ರ ಸಹಕಾರ ಸಂಘಗಳಲ್ಲಿ ದುಡಿಯುವ ನೌಕರರಿಗೆ ಸರಿಯಾದ ಸಂಬಳ, ಕೆಲಸದ ಗ್ಯಾರಂಟಿ ಮತ್ತು ಸರ್ಕಾರಿ ಸೌಲಭ್ಯ ಗಳನ್ಬು ನೀಡಬೇಕು ಎಂದು ಒತ್ತಾಯಿಸಿದರು  ಇದೇ ಸಂದರ್ಭದಲ್ಲಿ   ಕಚೇರಿ ಉಪ ವ್ಯವಸ್ಥಾಪಕ  ಡಾ.ಕೃಷ್ಣ ಮೂರ್ತಿರವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಟಿ.ಹೆಚ್ ಆನಂದ, ಸುಶೀಲ, ಲಿಂಗರಾಜು, ಟಿ ಸಿ ರವಿ,  ಮಹೇಶ್ ಸೇರಿದಂತೆ  ಮತ್ತಿತರರು ಇದ್ದರು.

Share this article

About Author

Madhu