Print this page

ಜೈಲ್ ಭರೋ ಚಳುವಳಿ ನೂರಾರು ಪ್ರತಿಭಟನಾಕಾರ ಬಂಧನ.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಜೈಲ್ ಭರೋ ಚಳುವಳಿ ಕಾರ್ಯಕ್ರಮ 

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಜನವಾದಿ ಮಹಿಳೆ ಸಂಘಟನೆ ಮತ್ತು ವಿವಿದ ಸಂಘಟನೆಗಳ ವತಿಯಿಂದ ಮಳವಳ್ಳಿಪಟ್ಟಣದ  ತಾಲ್ಲೂಕು ಕಚೇರಿ ಮುಂದೆ  ಜೈಲ್ ಭರೋ ಚಳುವಳಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಿಂದ ಹೊರಟಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ  ಪ್ರಮುಖ ಬೀದಿಗಳ ಮೂಲಕ ಸಾಗಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು ನಂತರ ಪೊಲೀಸರಿಗೂ ಪ್ರತಿಭಟನಾಕಾರರು ದಿಕ್ಕಾರ ಕೂಗಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ , ಮೋದಿರವರು ನಮ್ಮ ತೆರಿಗೆ ಪಡೆದ ಹಣದಲ್ಲಿ ವಿದೇಶ ಸುತ್ತಿ ಮೋಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಕಚೇರಿಗೆ ಪ್ರತಿ ಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು.ಪೊಲೀಸರು ನೂರಾರು ಪ್ರತಿಭಟನೆಕಾರರನ್ನು ಬಂಧಿಸಿದರು. ಪ್ರತಿಭಟನೆಯಲ್ಲಿ  ಕರ್ನಾಟಕ  ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್ ಭರತ್ ರಾಜ್, ಸಿಐಟಿಯು ಜಿಲ್ಲಾ ಧ್ಯಕ್ಷ ಜಿ.ರಾಮಕೃಷ್ಣ, ಸುಶೀಲ, ಸುನೀತಾ, ತಿಮ್ಮೇಗೌಡ, ಬಸವರಾಜು,  ನೂರಾರು  ಕೂಲಿಕಾರರು ಸೇರಿದಂತೆ ಮತ್ತಿತ್ತರರು ಇದ್ದರು.

Share this article

About Author

Madhu