ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆ ಮತ್ತು ಸಂಘಟನೆಗಳಿಂದ ಪ್ರತಿಭಟನೆ .ಒಂದೇ ಕಾಮಗಾರಿ ಎರಡು ಕಡೆಗಳಿಂದ ಹಣ ಬಿಡುಗಡೆ ಮಾಡಿರುವ ಆರೋಪ.ಮಕ್ಕಳ ಪೋಷಕರಿಂದ ಸಹ ಹಣ ವಸೂಲಿ ಮಾಡಿರುವ ಆರೋಪ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪ.ಒಟ್ಟು ಐದು ಲಕ್ಷದ ಐವತ್ತು ಸಾವಿರ ರೂಪಾಯಿ ದುರ್ಬಳಕೆ ಮಾಡಿಕೊಂಡದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ನೇರವಾಗಿ ಆರೋಪ ಮಾಡಿದರು.ಅವರ ಏಕಾಂಗಿಯಾದ ಹೋರಾಟಕ್ಕೆ ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳು ಬೆಂಬಲ ನೀಡಿವೆ.ಅಕ್ರಮವಾಗಿ ಹಣ ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಂತಿಯುತ ದರಣಿ ಮಾಡಿದರು.ಅ ವ್ಯಕ್ತಿ ಗಳ ಮೇಲೆ ಕ್ರಮಜರುಗಿಸತ್ತಾರ ಕಾದು ನೋಡಬೇಕಿದೆ.