Print this page

ಮೂರು ದಿನಗಳಿಂದ ಗಂಗಾ ಕಲ್ಯಾಣ ಯೋಜನೆ ಅಡಿಯ 27ಜನ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಿಸದೆ ಪ್ರವಾಸಿ ಮಂದಿರದ ಬಳಿ ಕಾಯುಸುತ್ತಿದ್ದಾರೆ

ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಪರಿಕರಗಳನ್ನು ವಿತರಿಸದೇ ಶಾಸಕರು ಬಂದು ಫಲಾನುಭವಿಗಳಿಗೆ ವಿತರುಸುತ್ತಾರೆ ಎಂದು ಬಡ ರೈತರನ್ನು ಕಾಯುಸುತ್ತಿದ್ದಾರೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಗಂಗಾ ಕಲ್ಯಾಣ ಯೋಜನೆಯ ಅಡಿಯ ಪರಿಕರಗಳನ್ನು ವಿತರಿಸದೆ ಪ್ರವಾಸಿ ಮಂದಿರದ ಬಳಿ ಕಾಯಿಸಿದ ಘಟನೆ ನಡೆಯಿತು.ಶಾಸಕರು ಬಂದು ಫಲಾನುಭವಿಗಳಿಗೆ ವಿತರುಸುತ್ತಾರೆ ಎಂದು ಬಡ ರೈತರನ್ನು ಬಕ ಪಕ್ಷಿಗಳು ರೀತಿ ಕಾಯುತ್ತಿದ್ದಾರೆ.

ಒಟ್ಟು 27ಜನ ಫಲಾನುಭವಿಗಳಿಗೆ ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ವಿತರಿಸಬೇಕಿದ್ದ ಪಂಪ್ ಸೆಟ್,ಕೇಬಲ್, ಪೈಪ್ ಮತ್ತು ಬೋರ್ಡ್ ಗಳನ್ನು ವಿತರುಸುತ್ತಾರೆ ಎಂದು ಒಟ್ಟು 27ಜನ ಫಲಾನುಭವಿಗಳು ಅವರ ವಸ್ತುಗಳನ್ನು ಕೊಂಡುಹೊಗಲು ಅಟೊ ,ಚಾಲಕರು ಸಹ ಮೂರು ದಿನಗಳಿಂದಲೂ ಕಾಯತ್ತಿದ್ದಾರೆ.

ಅಧಿಕಾರಿಗಳು ಫಲಾನುಭವಿಗಳ ಮನೆಗಳ ಬಳಿ ಇಳಿಸಬೇಕಿದ್ದ ವಸ್ತುಗಳನ್ನು ಪ್ರವಾಸಿ ಮಂದಿರದಲ್ಲಿ ಇಳಿಸಿ ಬಡ ರೈತರನ್ನು ಕಾಯುಸುತ್ತಿದ್ದಾರೆ.ಕೂಡಲೇ ವಿತರಿಸಬೇಕು ಎಂದು ಫಲಾನುಭವಿಗಳು ಅಧಿಕಾರಿಗಳು ವಿರುದ್ಧ ಗುಡುಗ್ಗಿದ್ದರೆ.

 

 

Share this article

About Author

Madhu