Print this page

ರೇಷ್ಮೆ ಗೂಡಿನ ಬೆಲೆ ಕುಸಿತ ರೈತರಿಗೆ ತಾತ್ಕಾಲಿಕ ತೊಂದರೆ ಎಂದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರು

ಇಂದು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರೂ  ಕೆ.ಆರ್.ಪೇಟೆಯ ಗವಿಮಠದ ಕೇಂದ್ರ ರೇಷ್ಮೆ ಫಾರಂಗೆ ಬೇಟಿ. 

ಮಂಡ್ಯ ಜಿಲ್ಲೆಯ  ಕೃಷ್ಣರಾಜಪೇಟೆ ತಾಲ್ಲೂಕಿನ ಗವಿಮಠದ ಕೇಂದ್ರ ರೇಷ್ಮೆ ಫಾರಂಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಅವರು ಇಂದು ಬೇಟಿನೀಡಿದರು.ನಂತರ ಮಾತನಾಡಿ ರೇಷ್ಮೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ತಂದುಕೊಡುವ ಬಂಗಾರದ ಬೆಳೆಯಾಗಿದೆ. ರೈತರು ಕಬ್ಬು ಮತ್ತು ಭತ್ತ ಬೆಳೆಯುವುದನ್ನೇ ಬೇಸಾಯವೆನ್ನದೇ ರೇಷ್ಮೆ ಬೆಳೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿ ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ನಂತರ ರೇಷ್ಮೆ ಗೂಡಿನ ಬೆಲೆ ಕುಸಿತವು ರೈತರಿಗೆ ತಾತ್ಕಾಲಿಕ ತೊಂದರೆಯಷ್ಟೇ,ಸಧ್ಯದಲ್ಲಿಯೇ ರೇಷ್ಮೆ ಬೆಲೆಯು ಚೇತರಿಕೆಯಾಗುತ್ತಿದ್ದು ರೈತರಿಗೆ ಯಾವುದೇ ನಷ್ಠವಾಗುವುದಿಲ್ಲ.ರೇಷ್ಮೆ ಬೆಳೆಯ ಬೇಸಾಯಕ್ಕೆ ಮಂಡ್ಯ ಜಿಲ್ಲೆಯ ಹವಾಮಾನವು ಸೂಕ್ತವಾಗಿದೆ. ರೇಷ್ಮೆ ಬೇಸಾಯವು ಈಗ ಹೆಚ್ಚು ಸರಳವಾಗಿದ್ದು ಸರ್ಕಾರವು ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಹನುಮಂತರಾಯಪ್ಪ ಕರೆ ನೀಡಿದರು.

ಮೈಸೂರು ವಲಯದ ಜಂಟಿನಿರ್ದೇಶಕ ಡಾ.ನಾಯಕ್ ಹಾಗೂ ಮಂಡಳಿಯ ಸದಸ್ಯರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು...

Share this article

About Author

Madhu