ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು, ಒಂದು ಅಂಗಡಿ ಜಖಂ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು ಮತ್ತು ಒಂದು ಅಂಗಡಿ ಜಖಂಗೊಂಡ ಘಟನೆ ನಡೆದಿದೆ.ಮಧ್ಯಾಹ್ನ ಮೇವು ತುಂಬಿದ್ದ ಲಾರಿಯ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಅಂಗಡಿಯಲ್ಲಿದ್ದ ಗ್ರಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಯ ಹಿಂಭಾಗ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಯಲಾಗಿ, ಆಟೋ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗಳಿಗೆ ಗುದ್ದಿದೆ. ಈ ಸಂದರ್ಭದಲ್ಲಿ ಬೈಕ್, ಆಟೋ ಸೇರಿದಂತೆ ಅಂಗಡಿಯೂ ಜಖಂ ಆಗಿದೆ. ಎನ್ನಲಾಗಿದೆ.ಯಾವುದೇ ಪ್ರಾಣ ಹಾನಿಯಾಗಿಲ್ಲಾ.ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.