Print this page

ಅಕ್ರಮವಾಗಿ ಜಲ್ಲಿ ಕ್ರಷರ್ ನೇಡೆಸುತ್ತಿದ್ದಾರೆ ಎಂದು ಗ್ರಾಮಸ್ಥರಿಂದ ಪ್ರತಿಭಟನೆ.

ಜಿ.ಪಂ. ಸದಸ್ಯ ಎಚ್.ಟಿ.ಮಂಜು ಮಾಲೀಕತ್ವದ ಜಲ್ಲಿ ಕ್ರಷರ್ ಅಕ್ರಮ ಎಂದು ಅಕ್ಕಪಕ್ಕದ ಗ್ರಾಮಸ್ಥರಿಂದ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಜಿ.ಪಂ.ಸದಸ್ಯ ಎಚ್.ಟಿ.ಮಂಜು ಮಾಲೀಕತ್ವದ ಜಲ್ಲಿ ಕ್ರಷರ್ ಅಕ್ರಮ ಎಂದು ಅಕ್ಕಪಕ್ಕದ ಗ್ರಾಮಸ್ಥರಿಂದ ಪ್ರತಿಭಟನೆ.ಶಿವಪುರ ಗ್ರಾಮದ ನಾಗರಾಜು ನೇತೃತ್ವದಲ್ಲಿ ಅಕ್ಕಪಕ್ಕದ ಗ್ರಾಮಗಳಾದ ಶಿವಪುರ, ಬೇಲದಕೆರೆ, ಚಟ್ಟೇನಹಳ್ಳಿ ಮತ್ತು ಕಾಗೆಪುರ ಗ್ರಾಮಸ್ಥರಿಂದ ಪ್ರತಿಭಟನೆ.ಪ್ರತಿಭಟನಾಕಾರ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಮಾತನಾಡಿದ ನಾಗರಾಜು, ಕ್ವಾರೆ ನಡೆಸುತ್ತಿರುವ ಜಾಗ ಹಿಂದೆ ಸ್ಮಾಶನಕ್ಕೆ ಮೀಸಲಿಟ್ಟಿದ್ದು,ಕಲ್ಲು ಕ್ರಷರ್ ಶಿವಪುರ ಗ್ರಾಮದ ಹಳೆ ಗ್ರಾಮ ಠಾಣಾ ಆಗಿದ್ದು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೂಡಲೇ ಅಕ್ರಮವಾಗಿ ನಡೆಯುತ್ತಿರುವ ಕ್ರಷರ್ ಅನ್ನು ನಿಲ್ಲಿಸುವಂತೆ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

 

 

 

Share this article

About Author

Madhu