Print this page

ಕಾಮಗಾರಿಗಳ ಬಿಲ್ ಪಾವತಿಸಲು ಆಗ್ರಹಿಸಿ ರೈತಸಂಘ ಕಾರ್ಯಕರ್ತರಿಂದ ಪ್ರತಿಭಟನೆ.

ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಾಮಗಾರಿಗಳ ಬಿಲ್ ಪಾವತಿಸಲು ಆಗ್ರಹಿಸಿ ರೈತಸಂಘ ಕಾರ್ಯಕರ್ತರಿಂದ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಪಾಂಡವ ಪುರದಲ್ಲಿ ಇಂದುಕಾಮಗಾರಿಗಳ ಬಿಲ್ ಪಾವತಿಸಲು ಆಗ್ರಹಿಸಿ ರೈತಸಂಘ ಕಾರ್ಯಕರ್ತರಿಂದ ಪ್ರತಿಭಟನೆ ಹಿಂದಿನ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಮಂಜೂರು ಮಾಡಿಸಿದ್ದ ಸುಮಾರು 10ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳು ಹಾಗೂ ಪ್ರಗತಿಯಲ್ಲಿದ್ದ, ಕಾಮಗಾರಿಗಳ 10 ಕೋಟಿ ರೂ.ಗಳ ಬಿಲ್ ತಡೆಹಿಡಿದಿರುವ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಯಮಿತ (ಹಿಂದಿನ ಹೆಸರು ಭೂಸೇನಾ ನಿಗಮ) ಪಾಂಡವಪುರ ಕಚೇರಿಗೆ ರೈತ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ.

ಈ ವೇಳೆ ಭೂಸೇನಾ ನಿಗಮ ಪಾಂಡವಪುರ ಸಹಾಯಕ ನಿರ್ದೇಶಕ ಪುಟ್ಟಯ್ಯ ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ರೈತಸಂಘ ಕಾರ್ಯಕರ್ತರು.ಪುಟ್ಟಣ್ಣಯ್ಯ ನಿಧನ ನಂತರ ಇಲಾಖೆ ಮುಖ್ಯಸ್ಥರು ಇಲ್ಲಸಲ್ಲದ ಸಬೂಬು ಹೇಳಿಕೊಂಡು ಪ್ರಾರಂಭಗೊಂಡಿದ್ದ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದ ಮೇರೆಗೆ ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿವೆ.

ಕೆಲವು ಗ್ರಾಮಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆಂದು ಕಿತ್ತುಹಾಕಿರೋ ಕಾರಣ ಜನ-ಜಾನುವಾರುಗಳ ತಿರುಗಾಟಕ್ಕೆ ತೊಂದರೆಯಾಗಿ ನಿವಾಸಿಗಳು ನಿತ್ಯ ಶಾಪ ಹಾಕುತ್ತಿದ್ದಾರೆ. ಈ ಕಾಮಗಾರಿ ಪೈಕಿ ಭೂ ಸೇನಾ ನಿಗಮದ ಉಸ್ತುವಾರಿ, ನಿರ್ವಹಣೆ ಹಾಗೂ ಪಿಡ್ಲ್ಯೂಡಿ ಇಲಾಖೆ ಮೂಲಕ ನಿರ್ವಹಿಸಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳ‌ ಸಹ ಸ್ಥಗಿತಗೊಂಡಿವೆ ಎಂದು ಆರೋಪಿಸಿದ್ರು.

ಪಾಂಡವಪುರ ಪುರಸಭೆಯ ಸುಮಾರು 7.20 ಕೋಟಿ ರೂ. ಅಂದಾಜು ಮೊತ್ತದ ಅಭಿವೃದ್ಧಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂಬುದಾಗಿ ದೂರಿದರು ಪಂಚಾಯತ್ ರಾಜ್ ಇಲಾಖೆಯ ತುಂಡು ಗುತ್ತಿಗೆ ಕಾಮಗಾರಿಯೂ ಸ್ಥಗಿತಗೊಂಡಿವೆ.

ಇವೆಲ್ಲ ಗಮನಿಸಿದರೆ ಹಿಂದಿನ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಣ್ಣ ನೀರಾವರಿ ಸಚಿವರು ಉದ್ದೇಶಿಸಿದ್ದಾರೆಂಬ ಅನುಮಾನ ಮೂಡಿದೆ ಎಂದು ಆರೋಪಿಸಿದ್ರು.ತಕ್ಷಣ ಎಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಆಗ್ರಹಿಸಿದ್ರು.

ನಂತರ ತಾಲೂಕು ಕಚೇರಿ ಬಳಿ ಕೆಲ ಕಾಲ ಧರಣಿ ನಡೆಸಿ ತಹಸೀಲ್ದಾರ  ಹನುಮಂತರಾಯಪ್ಪ ಅವರಿಗೆ ಮನವಿ ಸಲ್ಲಿಸಿದ್ರು .ಪ್ರತಿಭಟನೆಯಲ್ಲಿ  ರೈತ ಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಕೋಟಿ ಶಂಕರೇಗೌಡ, ಕೆ.ಕೆ.ಗೌಡೇಗೌಡ, ಹೆಚ್.ಎನ್.ವಿಜಯಕುಮಾರ್, ಅಮೃತಿ ರಾಜಶೇಖರ್, ಬಾಬು, ವೆಂಕಟೇಶ್ ಮೊದಲಿಯಾರ್,ಅನೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Last modified on 30/07/2018

Share this article

About Author

Madhu