Print this page

ನಕಲಿ ಚಿನ್ನದ ಲಕ್ಷ್ಮೀ ಕಾಸು ಮಾರಾಟ ಮೋಸ ಹೋದ ಮಹಿಳೆಯರು

    ಪಾಂಡವಪುರದಲ್ಲಿ ನಕಲಿ ಚಿನ್ನದ  ಲಕ್ಷ್ಮೀ ಕಾಸು ಮಾರಾಟ ಮೋಸ ಹೋದ ಮಹಿಳೆಯರು 

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಅಪರಿಚಿತ ಮಹಿಳೆಯರ ತಂಡವೊಂದು ಸ್ಲಂ ಬಡಾವಣೆ, ಜನಸಂದನಿ ಸ್ಥಳದಲ್ಲಿ ಮಹಿಳೆಯರಿಗೆ ಮಾರಾಟ ಮಾಡಲಾಗುತ್ತಿರುವ ನಕಲಿ‌‌ ಲಕ್ಮೀ ಕಾಸು. ನಕಲಿ‌‌ ಚಿನ್ನದ ಕಾಸನ್ನು‌ ಹಿತ್ತಾಳೆ ಪದಾರ್ಥದಿಂದ ತಯಾರಿಸಿ  ಮಾರಾಟ ಮಾಡಲಾಗುತ್ತಿದೆ.

ಗೃಹಿಣಿಯರು ತಾಳಿ ಜೊತೆ ಹಾಕುವ ಲಕ್ಷ್ಮೀ ಕಾಸನ್ನು ಇದೀಗ ಮಹಿಳೆಯರ ತಂಡ ನಕಲಿ ತಯಾರಿಸಿ ಮಾರಾಟ ಮಾಡಲಾಗುತಿದ.ನೋಡಲು ಅಸಲಿ‌ ಚಿನ್ನದಂತೆ ಕಾಣುವ ನಕಲಿ ಚಿನ್ನದ ಲಕ್ಷ್ಮೀ  ಕಾಸು.ನಕಲಿ ಚಿನ್ನದ ಲಕ್ಷ್ಮೀ ಕಾಸಿನಲ್ಲಿ ಲಕ್ಷ್ಮೀ ಚಿತ್ರ, 22 ಕ್ಯಾರೇಟ್ ಗೋಲ್ಡ್, ಯಾವುದಾದರೂ ಇಸವಿ ಮುದ್ರಿಸಲಾಗಿದೆ.ನಕಲಿ ಚಿನ್ನದ ಲಕ್ಷ್ಮೀ ಕಾಸನ್ನು 500, 1000 ರುಪಾಯಿ ಕೊಟ್ಟರೆ ಸಾಕು ತಕ್ಷಣ ಕೊಡುತ್ತಾರೆ.

ನಕಲಿ ಲಕ್ಷ್ಮೀ ಕಾಸಿನ ನಿಜವಾದ ಬೆಲೆ ಕೇವಲ 30 ರೂ ಅಥವಾ 40ರೂ ಅಷ್ಟೇ ಎಂದು ಹೇಳಲಾಗುತ್ತಿದೆ.ಮಹಿಳೆಯರ ತಂಡ ಪ್ರತ್ಯೇಕವಾಗಿ ನಕಲಿ‌ ಲಕ್ಷ್ಮೀ ಕಾಸನ್ನು‌ ಹಿಡಿದುಕೊಂಡು ಕೆಲ ವೈಯಕ್ತಿಕ ಕಷ್ಟ, ಸಮಸ್ಯೆ ಹೇಳಿಕೊಂಡು ಅಳುತ್ತಾ ಹೆಂಗಸರನ್ನು ನಂಬಿಸಿ ಮಾರಾಟ ಮಾಡುತ್ತಿದ್ದಾರೆ.ನಂಬಿ‌ ಮೋಸ ಹೋದ ಮಹಿಳೆಯೊಬ್ಬರು ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಈ ನಕಲಿ‌ ಜಾಲ‌ ಬಹಿರಂಗಗೊಂಡಿದೆ. ಮಹಿಳೆಯೊಬ್ಬರು ಚಿನ್ನದ ಅಂಗಡಿಗೆ ಗಿರಿವಿಗೆಂದು ಹೋದಾಗ ನಕಲಿ ಎಂದು ಗೊತ್ತಾಗಿದೆ.

ಪಾಂಡವಪುರ ಪಟ್ಟಣದಲ್ಲಿ ಇಂತಹ ನೂರಾರು ಪ್ರಕರಣ ನಡೆದಿರುವ ಶಂಕೆ.ಮೋಸಕ್ಕೆ ಒಳಗಾದ ಮಹಿಳೆಯರು ನಕಲಿ‌ ಲಕ್ಷ್ಮೀ ಕಾಸನ್ನು ಪಾಂಡವಪುದ ಪೊಲೀಸರಿಗೆ ನೀಡಿದ್ದಾರೆ.ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಜಾಲವನ್ನು ಪೊಲೀಸರು ಹಿಡಿಯಬೇಕೆಂದು ಸಾರ್ವಜನಿಕರ ಒತ್ತಾಯ.

 

/ws-in.amazon-adsystem.com/widgets/q?ServiceVersion=20070822&OneJS=1&Operation=GetAdHtml&MarketPlace=IN&source=ac&ref=qf_br_asin_til&ad_type=product_link&tracking_id=8277777181-21&marketplace=amazon&region=IN&placement=B077PWBC7J&asins=B077PWBC7J&linkId=804bab325d340718943f6d129ac214ab&show_border=false&link_opens_in_new_window=false&price_color=333333&title_color=0066C0&bg_color=FFFFFF">

Last modified on 22/07/2018

Share this article

About Author

Madhu