Print this page

ಮಳವಳ್ಳಿಯಲ್ಲಿ ಇಂದು ನಾಲ್ಕನೆಯ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ಮಳವಳ್ಳಿಯಲ್ಲಿ ಇಂದು ಮ.ಸಿ. ನಾರಾಯಣ ರವರು ಅಧ್ಯಕ್ಷತೆಯಲ್ಲಿ ನಾಲ್ಕನೆಯ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಾಲ್ಕನೇಯ ತಾಲೋಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ನೆಡೆಯಿತು.ತಾಲೋಕು ಪಂಚಾಯಿತಿ ಮುಂಭಾಗದಿಂದ ಪೂಜಾ ಕುಣಿತ, ಡೋಳ್ಳು ಕುಣಿತ, ಕೀಲು ಕುದುರೆ, ದೊಣ್ಣೆ ವರಸೆ ತಮಟೆ, ನಗಾರಿಯ ಜೊತೆಗೆ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳು ಪೂರ್ಣ ಕುಂಭ ದೊಂದಿಗೆ ಸಮ್ಮೇಳನ ಅಧ್ಯಕ್ಷರಾದ ಮ.ಸಿ. ನಾರಾಯಣ ರವರನ್ನು ಬೆಳ್ಳಿ ರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿ ಮುಲಕ ಷಡಕ್ಷರ ದೇವ ಹೆಬ್ಬಾಗಿಲು ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಶ್ರೀ ಪಂಡಿತ್ ಮಲ್ಲಪ್ಪ ವೇದಿಕೆಯಲ್ಲಿ ನೆಡೆದ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಮಳವಳ್ಳಿ ರವರು ಉದ್ಘಾಟಿಸಿದರು.

ಶಾಸಕರಾದ ಕೆ. ಅನ್ನದಾನಿ ರವರು ಮಾತನಾಡಿ ಮ.ಸಿ. ನಾರಾಯಣ ರವರು ನಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ನಮ್ಮೆಲ್ಲರ ಹೆಮ್ಮೆ, ನಿಮ್ಮ ಭಾಗವಹಿಸುವಿಕೆಯೇ ನಾಡು ನುಡಿ, ಜಲದ ಬಗ್ಗೆ ನಮ್ಮೆಲ್ಲರಲ್ಲಿಯೂ ಹೆಮ್ಮೆ ತರುವಂತಹದು, ಅದರಿಂದಾಗಿಯೇ ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ಅಚ್ಚುಕಟ್ಟಾದ ಯಶಸ್ವಿ ಕಾರ್ಯಕ್ರಮ ನೆಡೆಯುತ್ತಿದೆ.ಇಡೀ ರಾಜ್ಯದಲ್ಲಿ ಸಂಪೂರ್ಣ ಕನ್ನಡ ಭಾಷೆಯನ್ನು ಬಳಕೆ ಮಾಡುವ ಜಿಲ್ಲೆ ಎಂದರೆ ಅದು ಮಂಡ್ಯ ಜಿಲ್ಲೆ ಎಂದರು. ನಮ್ಮ ಸಂಸ್ಕೃತಿ ಬಿಂಬಿಸುವ ಗಗನಚುಕ್ಕಿ ಜಲಪಾತೋತ್ಸವ ಆಗಸ್ಟ್ ೧೫-೨೬ ರಂದು ನೆಡೆಯಲಿದ್ದು, ಇಂತಹ ವಿಶ್ವ ವಿಖ್ಯಾತ ಜಲಪಾತ, ವಿಶ್ವ ವಿಖ್ಯಾತಿ ಪಡೆದ ರಂಗಭೂಮಿ ನಟಿ ಸುಂದ್ರಮ್ಮ, ವಚನ ಸಾಹಿತ್ಯದ ಪ್ರಸಿದ್ದ ಹೆಸರಾದ ಷಡಕ್ಷರ ದೇವರಂತಹ ಐತಿಹಾಸಿಕ ವ್ಯಕ್ತಿಗಳು ನಮ್ಮ ತಾಲೋಕಿನ ಮೇರು ಶಿಖರಗಳು ಎಂದರು.ಮೊಬೈಲ್ ನಿಂದ ದೂರ ಉಳಿದು ಸಾಹಿತ್ಯ ಅಧ್ಯಯನ ಮಾಡಬೇಕಾದ ಅನಿವಾರ್ಯವಿದೆ ಎಂದರು.

ಮ.ಸಿ. ನಾರಾಯಣ ರವರು ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಮಳವಳ್ಳಿ ತಾಲೋಕು ಬಹಳ ಶ್ರೀಮಂತವಾದ ಸಾಹಿತ್ಯ ಪರಂಪರೆ ಹೊಂದಿದ್ದು ಇದನ್ನು ರಚನೆ ಮಾಡಿದ ಕವಿಗಳಾದ ಷಡಕ್ಷರ ದೇವ ನಮ್ಮ ತಾಲೋಕಿನ ಧನಗೂರಿನವರು, ತಮ್ಮ ಜ್ನಾನ ಕಿರಣ ಪ್ರಕಾಶನದ ಮೂಲಕ ಹೆಸರಾದ ಪಂಡಿತ್ ಮ.ಮಲ್ಲಪ್ಪನವರು ಸಹ ಹಲಗೂರಿನವರು, ಬೆಸ್ತ ಗೆರೆಗಳು, ಗೆಂಡಗಯ್ಯ ಎಂಬ ಕೃತಿಗಳನ್ನು ರಚನೆ ಮಾಡಿರುವ ಶಿವ ತಿರ್ಥನ್ ಸಹ ನಮ್ಮ ಮಳವಳ್ಳಿಯವರು,ಅಷ್ಟೇ ಅಲ್ಲದೇ ಮಾನ್ಯ ಶಾಸಕರಾದ ಅನ್ನದಾನಿ ರವರು ಸಹ "ಉತ್ತರ ದಿಕ್ಕಿನಿಂದ ಕತ್ತಲ ರಾಜ್ಯ "ಎಂಬ ಕೃತಿ ಬರೆದು ತಾಲೋಕಿನ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದು, ತಾಲೋಕಿನ ಹಲವಾರು ಮಹನೀಯರಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ.ಇಷ್ಟೆಲ್ಲಾ ಭವ್ಯ ಹಿನ್ನೆಲೆಯನ್ನು ಹೊಂದಿರುವ ನನ್ನ ತಾಲೋಕು ಮತ್ತಷ್ಟು ಸದೃಢವಾಗಬೇಕಿದ್ದು, ನಮ್ಮಲ್ಲಿರುವ ಸಣ್ಣ ಕೈಗಾರಿಕೆಗಳು, ರೇಷ್ಮೆ ಮಾರುಕಟ್ಟೆ ಪುನರುಜ್ಜೀವನಗೊಳ್ಳಬೇಕು. ಮುತ್ತತ್ತಿ, ಶಿವನಸಮುದ್ರ, ಬಸವನಬೆಟ್ಟ ಅಭಿವೃದ್ಧಿಗೊಂಡು ಪ್ರವಾಸಿ ತಾಣಗಳಾಗಬೇಕು, ಮಳವಳ್ಳಿ ಪಟ್ಟಣದ ನಾಲ್ಕು ದಿಕ್ಕಿನಲ್ಲಿ ವಾಚಾನಾಲಯ ತೆರೆದು ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಸಾಹಿತ್ಯ ಆಸಕ್ತರಿಗೆ ಸಿಗುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ಅದ್ಯಕ್ಷರಾದ ಮ.ಸಿ. ನಾರಾಯಣ, ಶಾಸಕರಾದ ಡಾ. ಕೆ. ಅನ್ನದಾನಿ, ತಹಶೀಲ್ದಾರ್ ದಿನೇಶ್ ಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರ ಪಾಟೀಲ್, ಪುರಸಭೆ ಅಧ್ಯಕ್ಷ ರಿಯಾಜಿನ್, ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ರವಿ ಚಾಮಲಾಪುರ, ಮಳವಳ್ಳಿ ತಾಲೋಕು ಸಾಹಿತ್ಯ ಪರಿಷತ್ ಅದ್ಯಕ್ಷರಾದ ದೇವರಾಜು ಕೊದೆನ ಕೊಪ್ಪಲು ಸೇರಿದಂತೆ ಹಲವಾರು ಸಾಹಿತ್ಯ ಪ್ರೇಮಿಗಳು ಹಾಜರಿದ್ದರು.

Share this article

About Author

Madhu