ಶಾಸಕ ಡಾ.ಕೆ ಅನ್ನದಾನಿ ರವರು ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ರವರ ವಿರುದ್ದ ಅವಹೇಳನ ಹೇಳಿಕೆ ಮಾಡುತ್ತಿರುವುದು ಸರಿಯಲ್ಲ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಹಾಗೂ ಪುಟ್ಟರಾಮು ನೇತೃತ್ವದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪುಟ್ಟರಾಮು ಮಾತನಾಡಿ, ಶಾಸಕ ಅನ್ನದಾನಿ ಅವರು ಸಮ್ಮಿಶ್ರ ಸರ್ಕಾರದಲ್ಲಿದ್ದರೂ ಸಭೆ ಸಮಾರಂಭಗಳಲ್ಲಿ ಕುಮಾರಸ್ವಾಮಿ ಸರ್ಕಾರ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ತಾಕೀತು ಮಾಡಿದರು.
ನರೇಂದ್ರಸ್ವಾಮಿರವರು ಶಾಸಕರಾಗಿ, ಸಚಿವರಾಗಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ. ಆದರೆ ಅವರ ಬಗ್ಗೆ ಹಿಟ್ಟರ್ ಆಡಳಿತ , ದುರಂಹಕಾರಿ ಎಂದು ಸಭೆಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು.ಒಂದು ವೇಳೆ ಇದೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ. ನಮ್ಮ ನಾಯಕರಾದ ನರೇಂದ್ರಸ್ವಾಮಿರವರು ಕ್ಷೇತ್ರದ ಸಾಧನೆಯನ್ನು ತಾಲ್ಲೂಕಿನ ಜನತೆ ಮೆಚ್ಚಿದ್ದು ಒಂದು ವೇಳೆ ಶಾಸಕ ಅನ್ನದಾನಿರವರನ್ನು ಮಪರು ಪರೀಕ್ಷೆ ಗೆ ಒಳಪಡಿಸಿದರೆ ಅವರು ನರೇಂದ್ರಸ್ವಾಮಿರವರ ಸಾದನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ನನ್ನ ಅನಿಸಿಕೆ ಎಂದರು.
ಕೆಆರ್ ಎಸ್ ನಲ್ಲಿ 74 ಅಡಿ ಇದ್ದಾಗ ನಾಲೆಗೆ ನೀರು ನೀಡುವಂತೆ ಈ ಹಿಂದೆ ಮಾನ್ಯ ಅನ್ನದಾನಿರವರು ಪತ್ರಿಭಟನೆ ನಡೆಸಿದ್ದರು ಈಗ ಕೆಆರ್ ಎಸ್ ಭರ್ತಿಯಾಗಿ ಹೊಳೆ ಹರಿಯುತ್ತಿದ್ದರೂ ಇದುವರೆಗೂ ನಾಲೆ ಗಳಿಗೆ ನೀರು ಬಿಟ್ಟಿಲ್ಲ, ಈಗಾಗಲೇ ಪಕ್ಕದ ತಾಲ್ಲೂಕಿನಲ್ಲಿ ಪೈರು ಹಾಕಿದ್ದಾರೆ. ಆದರೆ ನಮ್ಮ ತಾಲ್ಲೂಕು ಕೊನೆಭಾಗವಾಗಿದ್ದು ಇನ್ನೂ ಪೈರು ಹಾಕುವುದಕ್ಕೂ ನೀರು ಬಿಟ್ಟಿಲ್ಲ ಇದೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ಎನ್ ವಿಶ್ವಾಸ್ , ಉಪಾಧ್ಯಕ್ಷ ನಾದು, ಜಿ.ಪಂ ಸದಸ್ಯರಾದ ಸುಜಾತಪುಟ್ಟು, ಹನುಮಂತ, ಚಂದ್ರಕುಮಾರ ಸೇರಿದಂತೆ ಮತ್ತಿತ್ತರರು ಇದ್ದರು