Print this page

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಪ್ರತಿಭಟನೆ.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ತಾಲ್ಲೂಕು ಕಛೇರಿ ಬಳಿ ಪ್ರತಿಭಟನೆ..

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲ್ಲೂಕು ಕಛೇರಿ ಬಳಿ ಪ್ರತಿಭಟನೆ ಮಾಡಲಾಯಿತು.ಅಧಿಕಾರಿಗಳು ರೈತರಿಗೆ ಮತ್ತು ಜನಸಾಮಾನ್ಯರಿಗೆ ಕೆಲಸಮಾಡಿ ಕೊಡಲು ಉಡಾಪೆ ಉತ್ತರ ನೀಡಿ ನಿರ್ಲಕ್ಷ್ಯ ಮಾಡುತ್ತಾರೆ.ಮತ್ತು ತಾಲ್ಲೂಕು ಅಪೀಸ್ ಬಳಿ ಕುಡಿಯುವ ನೀರಿನ ಮತ್ತು ಶೌಚಾಲಯ ದ ವ್ಯವಸ್ಥೆ ಇಲ್ಲಾ.ಯಾವಾಗಲೂ ಅಧಿಕಾರಿಗಳು ಪಟ್ಟಣದಲ್ಲಿ ಇದ್ದು ರೈತರು ದಿನನಿತ್ಯ ಅವರನ್ನು ಭೇಟಿಯಾಗಲು ಹರಸಾಹಸ ಪಡಬೇಕಿದೆ.ಗ್ರಾಮಲೆಕ್ಕಿಗರು ಮತ್ತು ರಾಜ್ಯ ಸ್ವಾನಿರಿಕ್ಷರು ಯಾವಾಗಲೂ ಸ್ಥಳೀಯ ಕಛೇರಿ ಬಿಟ್ಟು ಪಟ್ಟಣದಲ್ಲಿ ಇರುತ್ತಾರೆ.

ಹೆಸರಿಗೆ ಮಾತ್ರವೇ ಸೀಮಿತ ಸಕಾಲ ಎಲ್ಲಾ ಕೆಲಸಕ್ಕೆ ಬೇಕು ಹಣದ ಬಲ.ಅರ್ ಟಿ ಸಿ ಪಡೆಯಲು ಬೆಳ್ಳಿಗೆ ಬಂದರೆ ಸಂಜೆಯಾಗುತ್ತೆ ,ಭೂಮಾಪನ ಇಲಾಖೆಯಲ್ಲಿ ಕೆಲಸ ಮಾಡಿಸಲು ಹರಸಾಹಸ ಪಡಬೇಕು .ಆಹಾರ ಮತ್ತು ಚುನಾವಣಾ ಆಫೀಸ್ಗಳಲ್ಲಿ ಇರುವ ಕಂಪ್ಯೂಟರ್ ಆಪರೇಟರ್ ಗಳು ಕರೆಂಟ್ ಇಲ್ಲಾ ,ಸರ್ವರ್ ಇಲ್ಲಾ ಎಂದು ರೈತರಿಗೆ ಮತ್ತು ಜನಸಾಮಾನ್ಯರಿಗೆ ಅವಾಜ್ ಹಾಕುತ್ತಾರೆ ಎಂದು ಆರೋಪಿಸಿದರು.

ಈ ಕೂಡಲೆ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು..

ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ವೇಣು, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್,ಮುಖಂಡರಾದ ಭರತ್,ಚಿಕ್ಕೋನಹಳ್ಳಿ ಚೇತನ್ ಸೇರಿದಂತೆ ಹಲವರಿದ್ದರು.

Share this article

About Author

Madhu