Print this page

ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿವಂಗತ ಹೆಚ್.ಎಲ್.ಹನುಮಂತೇಗೌಡರಿಗೆ ನುಡಿನಮನ, ಶ್ರದ್ಧಾಂಜಲಿ.

ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿವಂಗತ ಹೆಚ್.ಎಲ್.ಹನುಮಂತೇಗೌಡರಿಗೆ ನುಡಿನಮನ, ಶ್ರದ್ಧಾಂಜಲಿ .

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿವಂಗತ ಹೆಚ್.ಎಲ್.ಹನುಮಂತೇಗೌಡರಿಗೆ ನುಡಿನಮನ, ಶ್ರದ್ಧಾಂಜಲಿ ಸಮರ್ಪಣೆ.
ಹನುಮಂತೇಗೌಡರು ನಾಯಕತ್ವ ಗುಣಗಳನ್ನು ಹೊಂದಿದ್ದ ಹೃದಯವಂತ ವ್ಯಕ್ತಿಯಾಗಿ ಸದಾ ಸಮಾಜದ ಹಿತವನ್ನೇ ಬಯಸುತ್ತಿದ್ದರು..ಅವರ ಅಕಾಲಿಕ ನಿಧನವು ಇಡೀ ಸಮಾಜಕ್ಕೆ ತುಂಬಲಾರದ ನಷ್ಠವಾಗಿದೆ. ನಾನು ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಕೊನೆಯಾಸೆಯಂತೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಭವನವನ್ನು ನಿರ್ಮಿಸುವ ದಿಕ್ಕಿನಲ್ಲಿ ಕ್ರಿಯಾಶೀಲರಾಗಿ ಹೆಜ್ಜೆ ಹಾಕಬೇಕು. ನಿವೃತ್ತ ನೌಕರರ ಭವನದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಮಾಜಿಸ್ಪೀಕರ್ ಕೃಷ್ಣ ತಿಳಿಸಿದರು...
ಅವರು ಇಂದು ತಾಲ್ಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದ ಹೆಚ್.ಎಲ್.ಹನುಮಂತೇಗೌಡರ 11ನೇ ದಿನದ ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮಂತೇಗೌಡರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡಿದರು...ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸದಾ ಸಮಾಜದ ಒಳಿತಿಗಾಗಿ ಚಿಂತಿಸುತ್ತಿದ್ದ ಹನುಮಂತೇಗೌಡರ ಪರಿಶ್ರಮದ ಫಲವಾಗಿ ಪಟ್ಟಣದಲ್ಲಿ ಶಿಕ್ಷಕರ ಭವನದ ನಿರ್ಮಾಣವಾಗಿದೆ. ಪ್ರಸ್ತುತ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಗೌಡರು ನಿವೃತ್ತ ನೌಕರರ ಸಮಸ್ಯೆಗಳ ನಿವಾರಣೆಗಾಗಿ ಸದಾ ಕೆಲಸ ಮಾಡುತ್ತಾ ನಿವೃತ್ತ ನೌಕರರ ಸಭಾ ಭವನದ ನಿರ್ಮಾಣಕ್ಕೆ ಹೆಜ್ಜೆಹಾಕಿ ಪುರಸಭೆಯ ವತಿಯಿಂದ ಸೂಕ್ತ ನಿವೇಶನವನ್ನೂ ಮಂಜೂರು ಮಾಡಿಸಿಕೊಂಡು ಅಡಿಪಾಯ ಕಾಮಗಾರಿಗೆ ಚಾಲನೆ ನೀಡಿದ್ದರು. ಸಂಘಟನಾ ಚತುರರಾಗಿ ರಾಜಕೀಯ ರಂಗದ ಅಜಾತ ಶತ್ರುವಿನಂತಿದ್ದ ಗೌಡರ ಆದರ್ಶ ಗುಣಗಳು, ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ಕೃಷ್ಣ ಕರೆ ನೀಡಿದರು... ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಎನ್.ಕೆ.ನಂಜಪ್ಪಗೌಡ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ಎ.ಎಲ್.ನಂಜಪ್ಪ, ಶ್ರೀಕಂಠೇಗೌಡ, ನಜೀರ್ ಅಹಮದ್, ಎಸ್.ಎಲ್.ರಂಗಸ್ವಾಮಿ, ಶಿವರಾಮ್, ವೆಂಕಟರಮಣಶೆಟ್ಟಿ, ಲಕ್ಷ್ಮಣಗೌಡ, ಗಣೇಶ್ ಗೌಡ, ಚಂದ್ರೇಗೌಡ ಮತ್ತಿತರರು ಹನುಮಂತೇಗೌಡರ ಆದರ್ಶ ಗುಣಗಳು ಹಾಗೂ ಜನಪರವಾದ ಹೋರಾಟವನ್ನು ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು...

 

Share this article

About Author

Madhu