Print this page

ಹಾಡುಹಗಲೆ ಮನೆಯ ಬೀಗ ತೆಗೆದು ಚಿನ್ನ ,ಹಣ ಕಳವು

ಹಾಡುಹಗಲೆ ಮನೆಯ ಬೀಗ ತೆಗೆದು ಚಿನ್ನ ,ಹಣ ಕಳವು

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದಲ್ಲಿ ಹಾಡುಹಗಲೆ ಮನೆಯ ಬೀಗ ತೆಗೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಇಂದು ಬೆಳ್ಳಿಗೆ ಕೆ ಆರ್ ಪೇಟೆಯಲ್ಲಿ ನೆಡೆದ ಕಳ್ಳತನ ಮಾಸುವ ಮುನ್ನವೇ ಇ ಘಟನೆ ನೆಡೆದಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ‌.

ನಾಯಸಿಂಗನಹಳ್ಳಿ ಹರಿಜನ ಸಮಾಜಕ್ಕೆ ಸೇರಿದ  ಲೆ| ಮಹಾದೇವಯ್ಯ ನ ಮಗ ದಿನೇಶ್ ಎಂಬುವವರು ಮನೆಯ ಬೀಗ ತೇಗೆದು 8ಗ್ರಾಮ್ ಎರಡು ಉಂಗುರ,6ಗ್ರಾಮ್ ಚೈನ್ ,ಎಂಟುಗ್ರಾಮ್ ಒಲೆ ಮತ್ತು ಮಕ್ಕಳ ಎರಡು ಉಂಗುರ ಮತ್ತು ಒಂದು ಜೊತೆ ಒಲೆ ಕಳ್ಳತನ ವಾಗಿವೆ ಎಂದು ದಿನೇಶ್ ರವರು ಪೋಲಿಸರಿಗೆ ತಿಳಿಸಿದ್ದಾರೆ.

ಮನೆಯ ಬೀಗದ ಕೀ ಅಲ್ಲೆ ಇಟ್ಟು ಎಂದಿನಂತೆ ಕೂಲಿ ಕೆಲಸಕ್ಕೆ ತೆರೆಳಿದ್ದ ದಿನೇಶ್ ನಂತರ ಊಟಕ್ಕೆ ಬಂದು ನೋಡಿದಾಗ ಮನೆಯ ಬೀಗ ತೆರದಿರುವುದ ಕಂಡು ನೋಡಿದಾಗ ಮನೆಯ ವಸ್ತುಗಳ ಚಿಲ್ಲಾಪಿಲ್ಲಾಗಿರುವುದನ್ನು ಕಂಡು ನೋಡಿದಾಗ  ಚಿನ್ನಾಭರಣ ಮತ್ತು ಹಣ ಕಳವು ಮಾಡಿರುವುದು ಗೊತ್ತಾಗಿದೆ

ಎಂದಿನಂತೆ ಮಕ್ಕಳು ಶಾಲೆಯಿಂದ ಬರುತ್ತಾರೆಂದು ಕೀ ಇಟ್ಟಿದ್ದರು ಇವರು ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಇವರು ಹರಿಜನರಾಗಿದ್ದು ಇವರು ಕೂಲಿ ಕೆಲಸ ಮಾಡಿ ತನ್ನ ಕುಟುಂಬ ಸಾಕುತ್ತಿದ್ದರು ...

ಇವರಿಗೆ ಇಬ್ಬರು ಮಕ್ಕಳು ಇದ್ದು ಇವರು ಶಾಲೆಯಿಂದ ಬರುತ್ತಾರೆ ಎಂದು ಮನೆಯ ಬೀಗ ಕೀ ಅಲ್ಲೆ ಇಟ್ಟು ಕೂಲಿ ಕೆಲಸಕ್ಕೆ ಹೋಗಿದ್ದರು.
ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನಲ್ಲಿ ಇದು ಇಂದಿನ ಎರಡನೇ ಪ್ರಕರಣ ವಾಗಿದೆ

Last modified on 23/07/2018

Share this article

About Author

Madhu