Print this page

ಚಿರತೆದಾಳಿ ಎರಡೂ ಹಸು ಕರುಗಳನ್ನು ತಿಂದ ಚಿರತೆ ಗ್ರಾಮಸ್ಥರಲ್ಲಿ ಭಯದವಾತವರಣ.

ಮಲ್ಲೇಗೌಡನಹಳ್ಳಿಯಲ್ಲಿ ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳನ್ನು ಕೊಂದ ಘಟನೆ ನೆಡೆದಿದೆ.

ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೊನಕೆರೆ ಹೋಬಳಿಯ ಮಲ್ಲೇಗೌಡನಹಳ್ಳಿಯಲ್ಲಿ ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳನ್ನು ಕೊಂದು ನಂತರ ಒಂದು ಹಸುವಿನ ಕರುವನ್ನು ಸ್ವಲ್ಪ ದೂರ ಎಳೆದ್ಯೊದು ತಿಂದಿರುವ ಘಟನೆ ನೆಡೆದಿದೆ. ಗ್ರಾಮದ ಕರಿಯಪ್ಪರವರ ಮಗ ವಸಂತ್ ಎಂಬುವರಿಗೆ ಸೇರಿದ ಹಸುಕರುಗಳು ರಾತ್ರಿ ಹೊರಗಡೆಯೆ ಕಟ್ಟಿ ಮಲಗ್ಗಿದ್ದ ವಸಂತ್ ಬೆಳ್ಳಗೆ ಎದ್ದು ನೋಡಿದರೆ ಎರಡು ಹಸು ಕರುಗಳು ಸತ್ತು ಬಿದ್ದಿವೆ.

ಒಂದು ಕರು ಸ್ಥಳದಲ್ಲಿ ಸತ್ತುಹೊಗಿದ್ದು ಮತ್ತೊಂದು ಕರುವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ಬೇಲಿಯ ಮಧ್ಯೆ ತಿಂದು ಹೋಗಿದೆ.ಗ್ರಾಮಸ್ಥರಲ್ಲಿ ಭಯದ ವಾತಾವರಣ ಮನೆಮಾಡಿದೆ ಕೂಡಲೇ ಅರಣ್ಯಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೊತ್ತಾಯಿಸಿದ್ದರೆ.ಅರಣ್ಯಧಿಕಾರಿಗಳು ಇನ್ನೂ ಸ್ಥಳಕ್ಕೆ ಬೇಟಿ ನೀಡಿಲ್ಲ.

Share this article

About Author

Madhu