Print this page

ರಸ್ತೆಯಲ್ಲಾ ಇದು ಕೆಸರು ಗದ್ದೆ .ಸರಿಮಾಡದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ.

 ಕೂಡಲಕುಪ್ಪೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ ಗ್ರಾಮ ಯಾವುದೇ ಅಭಿವೃದ್ಧಿ ಕಾಣದೆ ಕೆಸರು ಗದ್ದೆಯಾಗಿದೆ.ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕಾಣದೆ ಸೊರಗಿ ಹೊಗಿದೆ.ಇಲ್ಲಿ ರಾಜಕೀಯ ಪಕ್ಷಗಳು ಮುಖಂಡರು ಚುನಾವಣಾ ಸಮಯದಲ್ಲಿ ಬರಿ ಮಾತಿನಲ್ಲಿ ಬರವಸೆ ನೀಡಿ ಒಟು ಪಡೆದು ನಂತರ ಗ್ರಾಮದ ಕಡೆ ಮುಖ ಕೂಡ ಮಾಡಿಲ್ಲಾ .ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ನಾರಾಯಣ ಗೌಡರಿಗೆ ಇ ಊರು ಎಲ್ಲಿದೆ ಎಂಬುದೆ ಗೊತ್ತಿಲ್ಲ.ಇದು ವಿಠಲಾಪುರ ಗ್ರಾಮ ಪಂಚಾಯತಿ ಸೇರಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಹ ಗಮನಹರಿಸುತ್ತಿಲ್ಲಾ.

 ಗ್ರಾಮದಲ್ಲಿ ಮುಖ್ಯ ರಸ್ತೆ ಕೆಸರು ಗದ್ದೆಯಾಗಿದ್ದು ವೃದರು ,ಮಕ್ಕಳು ,ಮಹಿಳೆಯರು ನೆಡೆದಾಡುಲು ಭಯ ಪಡುವ ಪರಿಸ್ಥಿತಿ ಇದೆ .ಮಳೆ ಬಂದರೆ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ ,ರಸ್ತೆಗಳು ಕೆರೆಯ ರೀತಿ ಕಾಣುತ್ತದೆ. ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಇತ್ತಕಡೆ ಗಮನ ಹರಿಸುತ್ತಿಲ್ಲಾ .ಇನ್ನೂ ನಮ್ಮ ಜನಪ್ರಿಯ ಶಾಸಕರಿಗೂ ಮನವಿ ನಿಡದರೂ ಇತ್ತಕಡೆ ಗಮನಕೊಡುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರು ಮತ್ತು ಅಧಿಕಾರಿಗಳು ಮೇಲೆ ಕೆಂಡಕಾರಿದ್ದರೆ .ಮತ್ತು ಗ್ರಾಮದ ರಸ್ತೆಗಳು ಕೆಸರು ಗುಂಡಿಯಾಗಿದ್ದು ಇ ಕೆಸರು ಗುಂಡಿಗೆ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಮತ್ತು ನಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡದ್ದಿದರೆ ಎಲ್ಲಾ ಚುನಾವಣಾ ಬಹಿಷ್ಕಾರ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇವಾಗಲಾದರು ಶಾಸಕರು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಅಭಿವೃದ್ಧಿ ಮಾಡತ್ತಾರ ಕಾದುನೊಡಬೇಕಿದೆ..

Share this article

About Author

Madhu