Print this page

ಶಾಸಕ ಕೆ.ಸಿ ನಾರಾಯಣಗೌಡರಿಗೆ ಬಂಗಾರದ ಮನುಷ್ಯ ಎಂಬ ಬಿರುದು ಪ್ರಧಾನ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರುಗಳ ಸಿದ್ಧಾಂತ, ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಶಾಸಕ ಕೆ.ಸಿ. ನಾರಾಯಣಗೌಡ ಕರೆ ನೀಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ.ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಕೆ.ಸಿ. ನಾರಾಯಣಗೌಡರು,ಭಾರತ ದೇಶ ಹಿಂದಿನಿಂದಲೂ ಬಹಳ ಸಂಪತ್ಭರಿತ ದೇಶವಾಗಿದ್ದು, ಸಂಪತ್ತನ್ನು ವಿದೇಶಿಯರು ಲೂಟಿ ಮಾಡಲು ವ್ಯಾಪಾರದ ನೆಪದಲ್ಲಿ ಬಂದು ಇಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ನೂರಾರು ವರ್ಷಗಳ ಕಾಲ ನಮ್ಮನ್ನು ಫರಕೀಯರು ಗುಲಾಮರಂತೆ ನಡೆಸಿಕೊಂಡು ಸ್ವತಂತ್ರ ಹೀನರನ್ನಾಗಿ ಮಾಡಿ, ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಬ್ರಿಟಿಷ್ ರೂಲ್ ತಂದು ನಮ್ಮನ್ನು ಆಳ್ವಿಕೆ ಮಾಡಿ ನಮ್ಮನ್ನ ಗುಲಾಮರನ್ನಾಗಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ನಮ್ಮ ಲಕ್ಷಾಂತರ ಜನರ ರಕ್ತದ ಓಕುಳಿ ಆಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನೂ ಬಂಧನ, ಮರಣದಂಡನೆ ಅಂತಹ ಕಠಿಣ ಶಿಕ್ಷೆಯನ್ನು ನೀಡಿ ಧ್ವನಿ ಇಲ್ಲದಂತೆ ಮಾಡಿದ್ದರು. ಸ್ವಾತಂತ್ರಯ ಹೋರಾಟಗಾರರು ಬ್ರಿಟಿಷರ ಗುಂಡೇಟಿಗೂ ಹೆದರದೆ ಪ್ರಾಣಭಯ ತೊರೆದು ಬ್ರಿಟಿಷರ್ ವಿರುದ್ದ ಹೋರಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.ದೇಶದೊಳಗೆ ಯಾರು ನುಸಿಯದಂತೆ ಕಾಯುತ್ತಿರುವ ಸೈನ್ಯಕ್ಕೆ ಕುಟುಂದಲ್ಲಿ ಒಬ್ಬರಾದರೂ ಸೈನ್ಯಕ್ಕೆ ಸೇರುವ ಮನಸ್ಸು ಮಾಡಬೇಕು. ಈ ಮೂಲಕ ದೇಶದ ಗಡಿ ಭದ್ರತೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಂಘದ ವತಿಯಿಂದ ಶಾಸಕ ನಾರಾಯಣಗೌಡರಿಗೆ ಬಂಗಾರದ ಮನುಷ್ಯ ಎಂಬ ಬಿರುದನ್ನು ಪ್ರಾದನ ಮಾಡಿ ಗೌರವಿಸಲಾಯಿತು. ತಾಲೂಕು ಆಡಳಿತದ ವತಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ತಹಸೀಲ್ದಾರ್ ಶಿವಮೂತರ್ಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಪಟ್ಟಣ ಠಾಣೆಯ ಪಿಎಸ್ಐ ವೆಂಕಟೇಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಗಿರೀಶ್ಕುಮಾರ್ ರಾಷ್ಟ್ರದ್ವಜಕ್ಕೆ ವಂದನೆ ಸಲ್ಲಿಸಿದರು.ಶತಮಾನದ ಶಾಲೆಯ ಆವರಣದಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣೆಗೆ ನಡೆಸಿ ಮುಖ್ಯ ವೇದಿಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಹಲವು ಜನಪದ ಪ್ರಕಾರದ ಕುಣಿತಗಳು ಮೆರವಣಿಗೆಗೆ ಸಾಥ್ ನೀಡಿದವು. ವಿವಿಧ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟದ ಸಂಗೀತಕ್ಕೆ ಹೆಜ್ಜೆ ಹಾಕಿ ನೃತ್ಯ ಸೇರಿದಂತೆ ಹಲವು ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾದವು.

ಜಿಪಂ ಸದಸ್ಯ ರಾಮದಾಸ್, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ಉಪಾಧ್ಯಕ್ಷ ಎ.ಎನ್.ಜಾನಕೀರಾಂ, ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಎಸ್. ರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಂ, ತಾ.ಪಂ ಇಓ ವೈ.ಎಂ.ಚಂದ್ರಮೌಳಿ ಸೇರಿದಂತೆ ತಾಲೂಕಿನ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share this article

About Author

Madhu