Print this page

ಹುಲಿಹಳ್ಳದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ 8 ನೇ ವರ್ಷದ ವಾರ್ಷಿಕ ಮಹೋತ್ಸವ

 ತಮ್ಮಡಹಳ್ಳಿ ಗ್ರಾಮದ ಹುಲಿಹಳ್ಳದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ  8 ನೇ ವರ್ಷದ ವಾರ್ಷಿಕ ಮಹೋತ್ಸವ.

  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮದ ಹುಲಿಹಳ್ಳದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ  8 ನೇ ವರ್ಷದ ವಾರ್ಷಿಕ ಮಹೋತ್ಸವ ನಡೆಯಿತು, ಶ್ರೀ ಮಹದೇಶ್ವರ ಸ್ವಾಮಿ ಗೋಪುರ,ಕಳಸ,ಗರುಡಗಂಭ, ಗಣೇಶ ,ಪ್ರತಿಷ್ಠಾಪನೆ, ಶ್ರೀ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಅನ್ಬಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.ಪುರ್ಣಾಹುತಿ,ಕುಂಭಾಂಭಿಷೇಕ, ಶ್ರೀ ಮಹದೇಶ್ವರ ಸ್ವಾಮಿ ಗೋಪುರ ಲೋಕಾರ್ಪಣೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು  ದೊಡ್ಡಕೆರೆಯಿಂದ ಹಾಲರಬಿ,ಬಾಯಿಬೀಗ, ಹಾಗೂ ಬಸಪ್ಪದೊಂದಿಗೆ ಮೆರವಣಿಗೆ ಸಮೇತ ಕಂಸಾಳೆ  ಕುಣಿತ,ಕಾಶಿಕುಣಿತ,ವಳಗೆರೆಹುಚ್ಚಮ್ಮ ಪೂಜೆ ಸಲ್ಲಿಸಿ  ಮಳವಳ್ಳಿ ಪಟ್ಟಣದ ಗಂಗಾಮತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ತಮ್ಮಡಹಳ್ಳಿ ಗ್ರಾಮಕ್ಕೆ  ಪೂಜಾಕುಣಿತ , ವೀರಗಾಸೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು  ಇದೇ ಸಂದರ್ಭದಲ್ಲಿ  ಆಗಮಿಸಿದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ   ಏರ್ಪಡಿಸಲಾಗಿತ್ತು .ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಗುಡ್ಡದ ಮಾದೇಶರವರು ಮಾತನಾಡಿ  ಕಳೆದ ಎಂಟು ವರ್ಷದಿಂದ ಭಕ್ತರು ದೇವಸ್ಥಾನವನ್ನು ಉನ್ನತಮಟ್ಟಕ್ಕೆ ಬೆಳೆಸಿದ್ದಾರೆ. ಎಂದರು.

ಕಾರ್ಯಕ್ರಮದಲ್ಲಿ  ದೇವಸ್ಥಾನ ಭಕ್ತ ಮಂಡಳಿ ಅಧ್ಯಕ್ಷ  ಮಹದೇಶ , ಮಳವಳ್ಳಿ ಗಂಗಾಮತಬೀದಿ ಯಜಮಾನರು , ತಮ್ಮಡಹಳ್ಳಿ ಗ್ರಾಮದ ಯಜಮಾನರು ಮುಖಂಡರುಗಳು ಇದ್ದರು.

Share this article

About Author

Madhu