Print this page

ಕಾವೇರಿ ನದಿಯ ಪ್ರವಾಹದಿಂದ ನೂರಾರು ಎಕರೆ ಜಮೀನು ಮುಳುಗಡೆ ಸಂಕಷ್ಟಕ್ಕೆ ಒಳಗಾದ ರೈತರ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ.

ಮಳವಳ್ಳಿ ತಾಲ್ಲೂಕಿನಲ್ಲಿ ಕಾವೇರಿ ನದಿಯ ಪ್ರವಾಹದಿಂದ ನೂರಾರು ಎಕರೆ ಜಮೀನು ಮುಳುಗಡೆ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರಕ್ಕೆ ಒತ್ತಾಯಿಸಿ ಪ್ರಾಂತ ರೈತ ಸಂಘ ಹಾಗೂ ಗ್ರಾಮಸ್ಥರು ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆ.ಎಸ್.ಅರ್.ಟಿ.ಸಿ ನಿಲ್ದಾಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್.ಭರತ ರಾಜ್ ಮಾತನಾಡಿ, ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹದಿಂದ ನೂರಾರು ಎಕರೆ ಭೂಮಿ ಮುಳಗಡೆಯಾಗಿದ್ದು ರೈತರ ಬೆಳೆಗಳು ಹಾಳಾಗಿದೆ ಅದರೆ ತಾಲ್ಲೂಕು ಆಡಳಿತ ಬಹಳ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಪರಿಣಾಮದಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹವು ನದಿಯಿಂದ ಕೆಲವು ಕಡೆ ಒಂದು ಕಿಲೊಮೀಟರ್ ಗಳವರೆಗೆ ಹುಲ್ಲಂಬಳ್ಳಿ.ಅಕ್ಕಮಲ್ಲಹುಂಡಿ .ಪೂರಿಗಾಲಿ.ಸೋಮನಹಳ್ಳಿ. ಬಿಳಿಜಗಲಿಮೊಳೆ.ಬೆಳಕವಾಡಿ ಜವನಗಳ್ಳಿಯ ರೈತರ ಭೂಮಿಯನ್ನ ಅವರಿಸಿಕೊಂಡು ರೈತರ ಬೆಳೆಗಳು ಮತ್ತು ನಾಟಿಗಾಗಿ ಭೂಮಿ ಅದಗೊಳಿಸಲು ಮಾಡಿರುವ ಹತ್ತಾರು ಸಾವಿರ ಹಣ ನಷ್ಟವಾಗಿದೆ ಕೆಲವು ಕಡೆ ಅರಿಸಿನ,ಮೆಕ್ಕೆಜೋಳ,ರಾಗಿ,ಭತ್ತದ ವಟ್ಟಲು,ನಾಟಿ ಮಾಡಿರುವ ಬೆಳೆ ಹಾಳಾಗಿದೆ .ತಾಲೂಕಿನ ದಂಡಾಧಿಕಾರಿಗಳು ಬೇಜವ್ದಾರಿಯಾಗಿ ವರ್ತಿಸುತ್ತಿದ್ದು ರೈತರ ಹಿತಕಾಯಲು ವಿಪಲವಾಗಿದ್ದಾರೆ ಅದ್ದರಿಂದ ಜಿಲ್ಲಾಧಿಕಾರಿ ಗಳು ತಕ್ಷಣ ಸ್ಪಂದಿಸಬೇಕು ರೈತರಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕ ವಾಗಿ ಲೆಕ್ಕ ಹಾಕಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ರೈತ ಸಂಘದ ನಿಯೋಗವು ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ರೈತರ ಅಭಿಪ್ರಾಯಗಳನ್ನು ಆಲಿಸಿದೆ ಎಂದರು. 

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಲಿಂಗರಾಜುಮೂರ್ತಿ,ಶಂಕರ್ ನವೀನ್ ಅನಿಲ್.ರವಿ ಮಲ್ಲೇಶ್ ಕುರಿ ನಿಂಗಯ್ಯ ಕೆಂಪರಾಜು.ವೆಂಕಟೇಶ. ಮಹೇಶ್. ಮುಂತಾದವರು ಭಾಗವಹಿಸಿದ್ದರು.

Share this article

About Author

Madhu