Print this page

ದೂರಿಗೆ ಹೆದರಿ ಮಗನ ಔತಣಕೂಟ ರದ್ದು ಮಾಡಿದ್ರಾ ಸಚಿವ ಪುಟ್ಟರಾಜು?

 ಆರ್​ಟಿಐ ಕಾರ್ಯಕರ್ತ ರವೀಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನಲೆ ಮಗನ ಬೀಗರ ಔತಣಕೂಟವನ್ನು ಸಚಿವ ಪುಟ್ಟರಾಜು‌ ರದ್ದುಪಡಿಸಿದ್ದಾರೆ ಎನ್ನಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸರ್ಕಾರಿ ಕ್ರೀಡಾಂಗಣದಲ್ಲಿ ನೆಡೆಯಬೇಕಿದ್ದ ತನ್ನ ಮಗನ ಬೀಗರ ಔತಣಕೂಟವನ್ನು ರದ್ದುಗೊಳಿಸಿ ಸಂತ್ರಸ್ತರಿಗೆ ಪರಿಹಾರವಾಗಿ ನೀಡಿದ ಸಚಿವರು ಆರ್​ಟಿಐ ಕಾರ್ಯಕರ್ತ ರವೀಂದ್ರ ದೂರಿಗೆ ಹೆದರಿ ಕಾರ್ಯವನ್ನು ನಿಲ್ಲಿಸಿದರೆ ಎಂಬ ಅನುಮಾನ ವ್ಯಕ್ತವಾಗುತ್ತದೆ .

ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಬಾಡೂಟ ಅಡುಗೆ ಮಾಡಿಸುತ್ತಿರುವುದಕ್ಕೆ ಆರ್​ಟಿಐ ಕಾರ್ಯಕರ್ತ ರವೀಂದ್ರ ದೂರು ನೀಡಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಗಾಗಿ ಬಾಡೂಟ ಹಾಕಿಸುತ್ತಿರುವುದಾಗಿ ಅವರು ಆರೋಪಿಸಿದ್ದರು.

ಇದೇ ಭಾನುವಾರ ಪಾಂಡವಪುರ ಸರ್ಕಾರಿ ಕ್ರೀಡಾಂಗಣದಲ್ಲಿ ತನ್ನ ಮಗನ ಬೀಗರ ಔತಣಕೂಟವನ್ನು ಸಚಿವರು ಆಯೋಜಿಸಿದ್ದರು. ಈ ಎಲ್ಲಾ ಘಟನೆ ಹಿನ್ನೆಲೆ ಔತಣಕೂಟ ರದ್ದುಮಾಡಿ ಕೊಡಗು ಸಂತ್ರಸ್ತರ ನಿಧಿಗೆ ಬೀಗರ ಔತಣಕೂಟದ ಹಣ ನೀಡಿ ಸಚಿವರು ತಮ್ಮ ಜಾಣ್ಮೆ ಪ್ರದರ್ಶಿಸಿದ್ದಾರೆ ಎನ್ನಲಾಗ್ತಿದೆ.ಬೀಗರ ಔತಣಕೂಟಕ್ಕಾಗಿ ಕ್ರೀಡಾಂಗಣದಲ್ಲಿ ಮಾಡಲಾಗುತ್ತಿದ್ದ ಸಿದ್ಧತೆ ಕಾರ್ಯ ಸ್ಥಗಿತವಾಗಿದೆ. ಆದರೆ, ಇದಕ್ಕೂ ಮೊದಲು ಬೆಂಗಳೂರು ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬೀಗರ ಅದ್ಧೂರಿ ಔತಣಕೂಟಕ್ಕೆ ಗಣ್ಯರು, ಹಿತೈಷಿಗಳು ಆಗಮಿಸಿ ಶುಭ ಕೋರಿದ್ದರು.

Share this article

About Author

Madhu