ಮಳವಳ್ಳಿ ಪಟ್ಟಣದ ಮಾನವ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ.
ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಮಾನವ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಿವೈಎಸ್ ಪಿ.ಮಲ್ಲಿಕ್ ಉದ್ಘಾಟಿಸಿ ಮಾತನಾಡಿ,ಮಾನವ ಹಕ್ಕು ಉಲ್ಲಂಘನೆಯಾಗುವ ಬಗ್ಗೆ ಸಂಕ್ಷಿಪ್ತ ವಾಗಿ ತಿಳಿಸಿದ ಅವರು ಅದೇ ರೀತಿ ಕಾನೂನಿನ ಬಗ್ಗೆ ಯಾವ ಯಾವ ಸೆಕ್ಷನ್ ಗಳಿವೆ ಎನ್ನುವುದನ್ನು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಹೆಚ್.ಎನ್ ಲಕ್ಷ್ಮೀಶ್ ಮಾತನಾಡಿ, ಮಾನವ ಹಕ್ಕುಗಳು ಇನ್ನೂ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮಾನವ ಹಕ್ಕುಗಳ ಚಲಾಯಿಸಿ , ಅದರ ಪ್ರಯೋಜನ ವನ್ನು ಸದುಪಡಿಸಿಕೊಳ್ಳುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿರವರು ನಿಧನವಾದ ಹಿನ್ನೆಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಒಂದು ನಿಮಿಷ ಮೌನ ಅಚರಣೆ ಮೂಲಕ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಸಮಿತಿ ಜಿಲ್ಜಾಧ್ಯಕ್ಷ ಹೆಚ್.ಎನ್ ಲಕ್ಷ್ಮೀಶ್, ತಾಲ್ಲೂಕು ಅಧ್ಯಕ್ಷ ಮುದ್ದಮಲ್ಲು, ಜಿಲ್ಲಾಉಪಾಧ್ಯಕ್ಷ ಕೆ.ಸಿ ನಾಗೇಗೌಡ, ಜಯರಾಮೇಗೌಡ, ಜಯಮ್ಮ, ರೋಟರಿ ಸಂಸ್ಥೆ ಅಧ್ಯಕ್ಷ ಸತೀಸ್ ಪೂಜಾರಿ,ಸಾಲುಮರನಾಗರಾಜು, ಸೇರಿದಂತೆ ಮತ್ತಿತ್ತರರು ಹಾಜರಿದ್ದರು.