ಶಾಲಾ ಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲಾ ಎಂದು ವಿದ್ಯಾರ್ಥಿಗಳಿಂದ ಜಾಗಿನಕೆರೆ ಬಳಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ತಡೆದು ಪ್ರತಿಭಟನೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಜಾಗಿನಕೆರೆ ಬಳಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ದಿನನಿತ್ಯ ಕೆ.ಆರ್.ಪೇಟೆಯಲ್ಲಿ ಇರುವ ಶಾಲಾಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಬಸ್ಸುಗಳು ಮೂಲಕ ಹೋಗುತ್ತಾರೆ ಅದರೆ ಇವರು ಹೊಗುವ ಸಮಯದಲ್ಲಿ ಅಂದರೆ ಬೆಳ್ಳಿಗೆ ೮:೧೫ ರಿಂದ ೯:೧೦ರ ತನಕ ಕೇವಲ ಒಂದೇಒಂದು ಬಸ್ಸು ಮಾತ್ರವೇ ಸಂಚರಿಸುತ್ತಿದ್ದು ಈ ಬಸ್ಸು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಇರುವುದರಿಂದ ಬಸ್ಸು ತುಂಬಿ ಹೋಗಿ ವಿದ್ಯಾರ್ಥಿಗಳಿಗೆ ನಿಲ್ಲಲು ಸಹ ಜಾಗವಿರುವುದಿಲ್ಲ ,ಈ ವಿಷಯವಾಗಿ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಹೆಚ್ಚುವರಿಯಾಗಿ ಬಸ್ಸುಗಳನ್ನು ನಿಯೊಜಿಸಿಲ್ಲ. ಅದ್ದರಿಂದ ವಿದ್ಯಾರ್ಥಿಗಳು ಕೆ.ಆರ್.ಪೇಟೆಯಿಂದ ಸಂತೇಬಾಚಹಳ್ಳಿಗೆ ಹೋಗುವ ಎಲ್ಲಾ ಬಸ್ಸು ಗಳನ್ನು ತಡೆದು ಪ್ರತಿಭಟಿಸಿದರು .ನಂತರ ಸ್ಥಳಕ್ಕೆ ಪಟ್ಟಣ ಪೊಲೀಸರು ಮತ್ತು ಡಿಪೊ ಮ್ಯಾನೇಜರ್ ಬಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಪ್ರತಿ ದಿನ ೮:೧೫ಕ್ಕೆ ಒಂದು ಬಸ್ಸು ಮತ್ತು ೮:೪೫ಕ್ಕೆ ಒಂದು ಬಸ್ಸುಗಳನ್ನು ಬಿಡಿವುದಾಗಿ ಭರವಸೆ ಕೊಟ್ಟರು ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ತಮ್ಮ ಶಾಲಾ ಕಾಲೇಜುಗಳಿಗೆ ಹೋದರು .
ಪ್ರತಿಭಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.