Print this page

ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿಪ್ರತಿಭಟನೆ.

ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ  ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕಾವೇರಿ ನೀರಾವರಿ ಕೊನೆಭಾಗದ ವ್ಯವಸಾಯಗಾರರ ಹೋರಾಟ ಸಮಿತಿ ವತಿಯಿಂದ  ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ಬೃಹತ್ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿಪ್ರತಿಭಟನೆ .

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನೆಭಾಗಕ್ಕೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕಾವೇರಿ ನೀರಾವರಿ ಕೊನೆಭಾಗದ ವ್ಯವಸಾಯಗಾರರ ಹೋರಾಟ ಸಮಿತಿ ವತಿಯಿಂದ  ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ಬೃಹತ್ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು.ಇದೇ ಸಂದರ್ಭದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾಧು ಮಾತನಾಡಿ, 5ಎ, 6ನಾಲೆಯ ತೂಬಿನಲ್ಲಿ  ನೀರೆತ್ತಿ ದುಗ್ಗನಹಳ್ಳಿ ಪಿಕ್ ಅಫ್ ಮೂಲಕ ದಡದಪುರ ,ಬಂಡೂರು, ಗಟ್ಟಿಕೊಪ್ಪಲು,ಸಸಿಯಾಲಪುರ ಕಲ್ಲಾರೇಪುರ ಗ್ರಾಮಗಳ ವ್ಯವಸಾಯಕ್ಕೆನೀರು ಹರಿಸಬೇಕು. ಮಾರೇಹಳ್ಳಿ ,ಮಳವಳ್ಳಿ ,ಗಂಗಾಧರನಕೆರೆಗೆ ನೀರು ತುಂಬಿಸಿ ಆ ಭಾಗದ ಭೂಮಿಗೆ ನೀರು ಪೂರೈಸಬೇಕು, ತಕ್ಷಣ ನೀರು ಕೊಡದಿದ್ದರೆ ತಮ್ಮ ಇಲಾಖೆಯ ಜವಾಬ್ದಾರಿಯಲ್ಲಿ ಭತ್ತದ ಸಸಿ ಬೆಳೆಸಿ ಸೆಪ್ಟೆಂಬರ್‌  2 ನೇ ವಾರ ಎಲ್ಲಾ ಬೇಸಾಯಗಾರರಿಗೂ ಸಸಿ ಹಂಚಿಕೆ ಮಾಡಬೇಕು. ಇದಲ್ಲದೆ ಕೆರೆಕಟ್ಟೆ ಕಾಲುವೆ ತೋಳ್ಗಾಲುವೆಗಳಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಸಿ ಗಲೀಜು ಮತ್ತು ಹೂಳನ್ನು ಎತ್ತಿಸಬೇಕು ಎಂದು ಒತ್ತಾಯಿಸಿದರು. ಹೊಸ ಸರ್ಕಾರ ಬಂದರೂ ರೈತರ ಕಷ್ಟವನ್ನು ನೋಡುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ  ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷ  ಶಿವಮಲ್ಲಯ್ಯ, ಬಂಡೂರು ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜು, ಬಸವರಾಜು, ಟಿ.ಹೆಚ್ ಆನಂದ್, ಎನ್ ಶಿವಕುಮಾರ್ , ಪಾಪಣ್ಣ, ಸೇರಿದಂತೆ ಮತ್ತಿತ್ತರರು ಇದ್ದರು.

Share this article

About Author

Madhu