Print this page

ಒಂಟಿ ಮನೆಯ ಬಾಗಿಲು ಮುರಿದು 2 ಲಕ್ಷರೂ ಚಿನ್ನಾಭರಣಗಳ ಕಳ್ಳತನ.

 ದುಷ್ಕರ್ಮಿಗಳ ಗುಂಪುಯೊಂದು ಯಾರು ಇಲ್ಲದ ಒಂಟಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ 4 ಸಾವಿರ ನಗದು ಸೇರಿದಂತೆ 2 ಲಕ್ಷ ರೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಎನ್.ಇ.ಎಸ್ ಬಡಾವಣೆಯ ಶೆಟ್ಟಿಹಳ್ಳಿ ರಸ್ತೆಯಲ್ಲಿರುವ  ಕಂದಾಯ ಇಲಾಖೆಯ ಮಹೇಶ ಎಂಬುವವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.  ಮನೆಯ ಮುಂದಿನ ಬಾಗಿಲು ಡೋರ್ ಲ್ಯಾಕ್ ಮುರಿದು, ಮನೆಯೊಳಗಿನ ಬೀರುನಲ್ಲಿದ್ದ 30 ಗ್ರಾಂ ಚೈನ್, 15 ಗ್ರಾ 2 ಉಂಗುರ, 6 ಗ್ರಾಂ ಡಾಲರ್ , ಅರ್ಥ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಸಿಲೆಂಡರ್ ಸಹ ಕಳ್ಳತನವಾಗಿದ್ದು,  ಸುಮಾರು ರಾತ್ರಿ 12 ರಿಂದ 1 ವೇಳೆಯಲ್ಲಿ ಕಳ್ಳತನ ವಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳ್ಳಚ್ಚು ತಜ್ಞರು  ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನವು  ಮನೆಯಿಂದ  ಮಂಡ್ಯ ರಸ್ತೆಯಲ್ಲಿರುವ ಕೆಎಸ್ ಆರ್ ಟಿ ಸಿ  ಚಾಲಕ ತರಬೇತಿ ಕಚೇರಿ ಬಳಿಯವರೆಗೂ ಹೋಗಿದ್ದು ,  ಬೆರಳ್ಳಚ್ಚು ತಜ್ಞರು ಸಹ ಬೆರಳುಗುರುತು ಸಂಗ್ರಹ ಮಾಡಿದ್ದಾರೆ.   

ಈ ಸಂಬಂದ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Share this article

About Author

Madhu