Print this page

ವಯಸ್ಕರ ಶಿಕ್ಷಣ ಇಲಾಖೆಯಿಂದ ಪ್ರೇರಕರ ಸಭೆ

ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ವಯಸ್ಕರ ಶಿಕ್ಷಣ ಇಲಾಖೆಯಿಂದ  ಪ್ರೇರಕರ ಸಭೆ ಇಓ ಚಂದ್ರಮೌಳಿ ,ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಮಾನ್ಯ ಇಓ ಚಂದ್ರಮೌಳಿ ಅವರ ಅಧ್ಯಕ್ಷತೆಯಲ್ಲಿ  ವಯಸ್ಕರ ಶಿಕ್ಷಣ ಇಲಾಖೆಯ  ಪ್ರೇರಕರ ಸಭೆ  ಬಲ್ಲೇನಹಳ್ಳಿ  ಪ್ರೇರಕ ಕುಮಾರ್ ರವರ ಪ್ರಾರ್ಥನೆಯೊಂದಿಗೆ  ಪ್ರಾರಂಭವಾಯಿತು. ನಂತರ ಮಾತನಾಡಿದ ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು 2018-19 ನೇ ಸಾಲಿಗೆ ವಯಸ್ಕರ ಶಿಕ್ಷಣ ಇಲಾಖೆಯ ವತಿಯಿಂದ ಡಾ.ನಂಜುಂಡಪ್ಪ ವರದಿ ಹಾಗೂ ಶ್ರೀ ಶಕ್ತಿ ಸಹಾಯ ಸಂಘಗಳ ಮೂಲಕ ಅನಕ್ಷರಸ್ಥರನ್ನು ಗುರುತಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಸೂಚಿಸಲಾಗಿದೆ.ಅದಕ್ಕೆ ಪೂರಕವಾಗಿ ಸರ್ಕಾರ ಪ್ರೇರಕರುಗಳನ್ನು ನೇಮಕ ಮಾಡಲು ಈಗಾಗಲೇ ಆದೇಶ ನೀಡಿದ್ದು ಫೆಬ್ರವರಿ ಮೊದಲ ವಾರದಲ್ಲಿ ಪ್ರೇರಕರುಗಳನ್ನು ನೇಮಕ ಮಾಡುವ ಸಂಬಂಧ ಅವರ ಬ್ಯಾಂಕ್ ಹೆಸರು,ಖಾತೆ ಸಂಖ್ಯೆ, ಐಎಫ್.ಎಸ್.ಸಿ.ಕೋಡ್ ಮುಂತಾದ ವಿವರಗಳನ್ನು ನೀಡಬೇಕಾಗಿದ್ದು  ಸರ್ಕಾರದ ಆದೇಶದ ಸುತ್ತೋಲೆಗಳನ್ನು ಎಲ್ಲಾ ಪ್ರೇರಕರಿಗೆ ವಿತರಿಸಿ ಕಾರ್ಯಕ್ರಮ ಅನುಷ್ಠಾನದ ವಿವರಗಳನ್ನು ತಿಳಿಸಲಾಯಿತು ಹಾಗೂ ಸಕಾಲದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಕೇಂದ್ರಕ್ಕೆ ಮಾಹಿತಿಗಳನ್ನು ಒದಗಿಸಲು  ಮತ್ತು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೇರಕರಿಗೆ ತಿಳಿಸಲಾಯಿತು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಮಾಜಿ ತಾಲ್ಲೂಕು ಸಂಯೋಜಕ ಹಾಗೂ ತಾಲ್ಲೂಕು ಸೇವಾದಳದ ಅದ್ಯಕ್ಷ ಚಂದ್ರಪ್ಪ ಪ್ರೇರಕರ ಸಂಘದ ಅದ್ಯಕ್ಷ ಅಣ್ಣಪ್ಪ  ಮೋಹನ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ತಾ.ಪಂ ವ್ಯಾಪ್ತಿಯ ಪ್ರೇರಕರುಗಳು ಹಾಜರಿದ್ದರು. 

 

Share this article

About Author

Madhu