Print this page

ರೇಷ್ಮೆ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರಸ್ತೆ ತಡೆದು ನಾಡ ಕಛೇರಿ ಮುಂದೆ ಪ್ರತಿಭಟನೆ


   ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಹಲಗೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರ ಒಕ್ಕೂಟದ ವತಿಯಿಂದ ಮಾನವ ಸರಪಳಿ ರಚಿಸಿ,ರಸ್ತೆ ತಡೆದು ನಾಡ ಕಛೇರಿ ಮುಂದೆ ಪ್ರತಿಭಟನೆ

   ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ,ರೇಷ್ಮೆ ಬೆಳೆಗಾರರ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು ಸಂಘಟನೆಗಳ ವತಿಯಿಂದ ರೇಷ್ಮೆ ಬೆಳೆಗಾರ ವಿವಿಧ ಬೇಡಿಕೆ ಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆಯನ್ನು ವಳಗೆರೆ ದೊಡ್ಡಿ ಕ್ರಾಸ್ ಹತ್ತಿರದಿಂದ ನಾಡ ಕಛೇರಿಯವರೆಗೆ  ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಪ್ರತಿಭಟನೆಯ ನೇತ್ರತ್ವವನ್ನ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕಷರಾದ ಭರತ್ ರಾಜ್ ಎನ್ .ಎಲ್ ರವರು ವಹಿಸಿ ಮಾತಾನಾಡಿದ ಅವರು ಬೆವರ ಬಿತ್ತಿ ಅನ್ನ ಬೆಳೆದು ದೇಶದ ಜನತೆಗೆ ಉಣಬಡಿಸುವ ರೈತರ ಗೋಳು ಕೆಳುವವರು ಯಾರು ಇಲ್ಲ. 

ಹೆಸರಿಗೆಮಾತ್ರ ಜೈ ಕಿಸಾನ್,ಅನ್ನದಾತ ,ದೇಶದ ಬೆನ್ನೆಲುಬು ಎಂದು ಹೋಗಳಿ ರೈತನ ಬದುಕನ್ನ ಸಮಸ್ಯಯ ಕೂಪದಲ್ಲಿ ಹೂಳುತ್ತಿದ್ದು,ಕೃಷಿ ವಲಯದಲ್ಲಿ ಇಂದು ತೀವ್ರ ಬಿಕ್ಕಟ್ಟಿನಲ್ಲಿದೆ ಇಂತಹ ಸನ್ನಿವೇಶದಲ್ಲಿ ಕೃಷಿ ವಲಯವನ್ನು ರಕ್ಷಿಸುವಂತಹ ಸನಿಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎರಡು ಕೂಡ ಇಚ್ಛಾಶಕ್ತಿ ಇಲ್ಲ ಎಂಬಂತೆ ಕಾಣುತ್ತದೆ, ಪೈಪೋಟಿಯ ಮೇಲೆ ನಾನು ತಾನು ರೈತನ ಮಕ್ಕಳೆಂದು ಹೇಳಿಕೊಂಡು ರೈತರ ,ಕೃಷಿ ಕಾರ್ಮಿಕರ, ಕೂಲಿ ಕಾರ್ಮಿಕರ, ಬಡವರ ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಕಡೆಗಣಿಸಿ ದೊಡ್ಡ ಬಂಡವಾಳ ಶಾಹಿಗಳ ಹಿತ ಕಾಪಡುತ್ತಿದ್ದಾರೆ,ರೈತರ ಮೂಗಿನ ಮೇಲೆ ಬೆಣ್ಣೆ ಸವರಿ ದೊಡ್ಡದು ಎಂಬಂತೆ ಬಿಂಬಿಸಿ ಬಿತ್ತರಿಸುತ್ತಿರುವ ಕೆಲವು ಸುದ್ದಿ ಮಾದ್ಯಮಗಳು ಕಾರ್ಪೊರೇಟ್ ಕಂಪನಿಗಳು ಹಾಗೂ ರಾಜಕಾರಣಿಗಳು ,ಉದ್ಯಮಿಪತಿಗಳ ಕೈಗೊಂಬೆಯಾಗಿವೆ,ಇವುಗಳು ದೇಶದ ಜನರನ್ನ ಮೂರ್ಖರನ್ನಾಗಿ ಮಾಡಲು ಹೊರಟಿವೆ,ಅಂತಹ ಮಾದ್ಯಮಗಳಿಂದ ದೂರ ಇರುವುದು ಸೂಕ್ತ,
ಇಷ್ಟ ಅಲ್ಲದೆ ಉದ್ಯಮ ಪತಿಗಳಿಗೆ ,ಕಾರ್ಪೊರೇಟ್ ಕಂಪನಿಗಳಿಗೆ  ಸಾವಿರಾರು ಎಕರೆ ವಿದ್ಯುತ್, ನೀರು, ರಸ್ತೆ, ಬ್ಯಾಂಕ್ ನ ಸಾಲ ಮತ್ತು ಸಬ್ಸಿಡಿ, ತೆರಿಗೆ ವಿನಾಯಿತಿ ,ಲಕ್ಷಾಂತರ ಕೋಟಿ ರೂಪಾಯಿಗಳನ್ನ ಸಾಲ ಮನ್ನ ಮಾಡುತ್ತಿದ್ದಾರೆ,ಆದರೆ ರೈತರ,ಕೃಷಿ ಕೂಲಿ ಕಾರ್ಮಿಕರ, ಬಡವರಿಗೆ ಯಾವುದೆ ಬ್ಯಾಂಕ್ ಸಾಲ, ಸಬ್ಸಿಡಿ,ತೆರಿಗೆ ವಿನಾಯಿತಿ, ಪ್ರೋತ್ಸಾಹ ಧನ ,ಬಿತ್ತನೆ ಬೀಜ, ಔಷಧಿಗಳು , ವೈಜ್ಞಾನಿಕ ಕೃಷಿ ಪರಿಕರಗಳು, ಸಮರ್ಪಕವಾಗಿ ದೊರೆಯುತ್ತಿಲ್ಲ.


ಎಲ್ಲ ಕ್ಕಿಂತ ಮಿಗಿಲಾಗಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೂರೆಯುತ್ತಿಲ್ಲ,ಹೈನುಗಾರಿಕೆಯಲ್ಲಿಯೂ ಸಹ ನೀರಿಗಿಂತ ಹಾಲಿನ ಬೆಲೆ ಕಡಿಮೆಯಿದೆ,ಇನ್ನೂ ಹಲವಾರು ಸಮಸ್ಯೆ ಗಳು ರೈತರನ್ನು ನರಳುವಂತೆ ಮಾಡಿವೆ ದಯಾ ಮಾಡಿ ಸಂಬಂಧಿಸಿದ ಇಲಾಖೆಯ ಮಂತ್ರಿಗಳು, ಅಧಿಕಾರಿಗಳು, ಒತ್ತಡ ತಂದು ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಕೇಂದ್ರದ ಪ್ರಧಾನಿ ಮಂತ್ರಿ ಗಳು ಸೂಕ್ತ ಕ್ರಮವನ್ನ ತೆಗೆದುಕೊಳ್ಳುವಂತೆ ಆಗ್ರಹಿಸಿದರು.


ಮತ್ತೊಬ್ಬ ರೈತ ಮುಖಂಡ ರಾದ  ವಳಗೆರೆ ದೊಡ್ಡಿ ಶ್ರೀ ನಿವಾಸ್ ರವರು ಮಂಡ್ಯ ಜಿಲ್ಲೆಯ ಜೀವನಾಡಿಯಂತ್ತಿದ್ದ ರೇಷ್ಮೆ ಬೆಲೆ ಕುಸಿತಗೊಂಡು ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾನೆ ಕಳೆದೆರಡು ತಿಂಗಳಲ್ಲಿ ರೂ೪೦೦-೫೦೦ ಇದ್ದ ರೇಷ್ಮೆ ಬೆಲೆ ರೂಪಾಯಿ ೧೫೦ -೨೦೦ ರೂಪಾಯಿ ಗಳಿಗೆ ಕುಸಿದಿದ್ದು ನಾವು ಕೊಂಡು ಕೊಳ್ಳುವ ರೇಷ್ಮೆ ಯ ಚಾಕಿ ಮರಿ,ಕ್ರಿಮಿನಾಶಕ, ಸೊಪ್ಪಿನ ಬೆಲೆ ,ಚಂದ್ರಿಕೆ ಬಾಡಿಗೆ, ಇತರ ನಿರ್ವಹಣೆ ವೆಚ್ಚವು ದುಬಾರಿಯಾಗಿವೆ.ಅದರ ಅನುಗುಣವಾಗಿ ಬೆಲೆ ಹೆಚ್ಚಾಗ ಬೇಕ್ಕಿತ್ತು ,ಆದರೆ ಬೆಲೆ ಕುಸಿತ ದಿಂದಾಗಿ ರೇಷ್ಮೆ ಬೆಳೆಗಾರನ ಗಾಯದ ಮೇಲೆ ಬರೆ ಎಳದಂತಾಗಿದೆ ಆದ್ದರಿಂದ ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ರೈತರ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಶ್ರಮಿಸಬೇಕೆಂದು ತಿಳಿಸಿದರು.


ಈ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ರೇಷ್ಮೆ ಇಲಾಖೆಯು ಉಪ ನಿರ್ದೇಶಕರ ಪರವಾಗಿ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ ಬಂದು ಕರ್ನಾಟಕ ರೈತ ಪ್ರಾಂತ ಸಂಘದ  ಹಾಗೂ ರೇಷ್ಮೆ ಬೆಳೆಗಾರರ ಒಕ್ಕೂಟದ ಮನವಿಯನ್ನ ಸ್ವೀಕರಿಸಿದರು.ಹಾಗೂ ಹಲಗೂರು ಹೋಬಳಿಯ ಉಪ ತಹಶಿಲ್ದಾರರಾದ ಉದಯ್ ಕಮಾರ್,ತಾಲ್ಲೂಕು ಪಂಚಾಯತ್ ಅಧಿಕಾರಿ ಬಾಬು,ಗ್ರಾಮ ಲೆಕ್ಕಕಿಗರಾದ ಶಿವಕುಮಾರ್ ಉಪಸ್ಥಿತಿ ರಿದ್ದರು. ಈ ಪ್ರತಿಭಟನೆಯಲ್ಲಿ ಹಲವಾರು ಸಂಘ ಸಂಸ್ಥೆಗಳು ಭಾಗವಹಿದವು ಸಿಐಟಿಯು ಜಿಲ್ಲಾಧ್ಯಕ್ಷರಾದ ಜಿ .ರಾಮಕೃಷ್ಣ 
ಜನವಾದಿ ಮಹಿಳಾ ಸಂಘದ ಸಶೀಲಮ್ಮ, ಜಯಶಂಕರ ಕೊನ್ನಪುರ,ಉಮೇಶ್ ಎಸ್ ಮೌರ್ಯ, ತಮ್ಮಯ್ಯ ಬೆಳ್ತೂರು,ನಾಗೇಶ್ ಗೋಲ್ಲರಹಳ್ಳಿ,ಮತ್ತಿತರರು ಹಾಜರಿದ್ದರು.

Last modified on 20/07/2018

Share this article

About Author

Madhu