Print this page

ಜಿಪಂ ಮಾಜಿ ಅಧ್ಯಕ್ಷೆ ನಿವಾಸದ ಬಳಿಯಿರುವ ರಸ್ತೆಯೇ ಅದ್ವಾನ.. ವಾಹನ ಸವಾರರ ಹಿಡಿಶಾಪ.


 ಹರಿಯಲದಮ್ಮ ದೇವಸ್ಥಾನದಿಂದ ಕುಂದೂರು ಮಾರ್ಗವಾಗಿ ಕಿಕ್ಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ಸಂಪೂರ್ಣ ಹಾಳಗಿದ್ದು ವಾಹನ ಸವರಾರು ಪರದಾಡುವಂತಾಗಿದೆ.

 ಕೆ.ಆರ್.ಪೇಟೆ ತಾಲೂಕಿನ ಹರಿಯಲದಮ್ಮ ದೇವಸ್ಥಾನದಿಂದ ಕುಂದೂರು ಗ್ರಾಮದ ಬಳಿಯಿರುವ ಹೇಮಾವತಿ ಎಡದಂಡೆ ನಾಲೆವರೆಗೆ ಸುಮಾರು ನಾಲ್ಕು ಕಿ.ಮೀ ರಸ್ತೆ ಮಣ್ಣಿನ ರಸ್ತೆಯಾಗಿದೆ. ವಾಹನಗಳು ಸಂಚರಿಸಿದರೆ, ಪಾದಚಾರಿಗಳ ಕಣ್ಣಿಗೆ ದೂಳು ರಾಚುತ್ತಿದೆ. ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿಮರ್ಾಣವಾಗಿವೆ. ಕೊರಕಲು ಬಿದ್ದಿದೆ. ರಸ್ತೆಯಲ್ಲಿ ಬಾರಿ ವಾಹನಗಳು ಸಂಚರಿಸುವುದರಿಂದ ಹಳ್ಳ, ದಿಣ್ಣೆಗಳು ನಿಮರ್ಾಣವಾಗಿವೆ. ಇದೇ ರಸ್ತೆಯಲ್ಲಿ ಪ್ರತಿದಿನ ಕಿಕ್ಕೇರಿ ಭಾಗದಿಂದ ಹ್ತತಾರು ಹಳ್ಳಿಯಿಂದ ಭಕ್ತರು ದೇವಸ್ಥಾನಕ್ಕೆ ಬರಲು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳನ್ನು ಚಲಿಸುವವರು ಗುಂಡಿಗೆ ನಿಧಾನವಾಗಿ ಇಳಸಿ ಹೋಗಬೇಕಿದೆ. ಇದೇ ಮಾರ್ಗವಾಗಿ ಸಕರ್ಾರಿ ಬಸ್, ಹಾಳಿನ ವಾಹನ, ಶಾಲಾ ವಾಹನಗಳು ಚಲಿಸುತ್ತಿವೆ. ವಾಹನದಲ್ಲಿ ಪ್ರಯಾಣಿಕರು ಜೀವವನ್ನು ಕೈಯಲ್ಲಿಟ್ಟಿಕೊಂಡು ಓಡಾಡುತ್ತಿದ್ದಾರೆ. ಕುಂದೂರು ಸುತ್ತಮತ್ತಲಿನ ಗ್ರಾಮಸ್ಥರು ದೇವಸ್ಥಾನ ಬಳಿಯಿರುವ ಸಕರ್ಾರಿ ಆಸ್ಪತ್ರೆಗೆ ಬರಲು ಕಷ್ಟ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡ ಶಾಪಹಾಕುತ್ತಿದ್ದಾರೆ.ಹಲವು ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕುಂದೂರಿಗೆ ರಸ್ತೆ ಪ್ರಾರಂಭವಾಗುವ ದೇವಸ್ಥಾನದ ಬಳಿ ಮಾಜಿ ಜಿಪಂ ಅಧ್ಯಕ್ಷೆ ಪ್ರೇಮಕುಮಾರಿ ಅವರ ನಿವಾಸ ಕೂಡ ಇದ್ದು, ಅವರು ಕೂಡ ವಾಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡೋದಾಗಿ ಹೇಳುತ್ತಾ ಬರುತ್ತಿದ್ದಾರೆ, ಹೊರೆತು ಕಾಮಗಾರಿ ಪ್ರಾರಂಭವಾಗಿಲ್ಲ. ಕಳೆದ ಎರಡು ಚುನಾವಣೆಗಳಿಂದ ರಸ್ತೆ ಕಾಮಗಾರಿ ಮಾಡುವಂತೆ ಜನಪ್ರತಿನಿಧಿಗಳಿಗೆ ದುಮ್ಮಾಲು ಬಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿ ಸಾರ್ವಜನಿಕರಿಗೆ ಮೂಲಸೌಕರ್ಯವಾದ ರಸ್ತೆಯನ್ನು ಗುಣಮಟ್ಟದಿಂದ ನಿಮರ್ಾನ ಮಾಡಿ ಸೇವೆಗೆ ನೀಡಲಿದ್ದಾರಾ ಎಂದು ಕಾದು ನೋಡಬೇಕಿದೆ.

Last modified on 25/07/2018

Share this article

About Author

Madhu