Print this page

ಶಾಸಕ ಡಾ.ಕೆ ಅನ್ನದಾನಿ ಗ್ರಾಮ ವಾಸ್ತವ್ಯ.

ಕಚೇರಿಗೆ ಅಲೆಸುವ ಅಧಿಕಾರಿಗಳಿಗೆ ಸಾರ್ವಜನಿಕರ ಕಷ್ಟ ಏನು ಎಂದು ತಿಳಿಸಲು ಶಾಸಕ ಡಾ.ಕೆ ಅನ್ಬದಾನಿ ಗ್ರಾಮ ವಾಸ್ತವ್ಯ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ದಲಿತ ಜಯರಾಜುಮನೆಯಲ್ಲಿ ವಾಸ್ತವ್ಯ ಹೂಡಿದಿದ್ದ ಶಾಸಕ ಡಾ.ಕೆ ಅನ್ಬದಾನಿ. ಇದೆ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಅಧಿಕಾರಿಗಳಿಗೆ ಸಾರ್ವಜನಿಕರ ಕಷ್ಟ ಏನು ಎಂದು ತಿಳಿಸಲು  ಗ್ರಾಮ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ಶಾಸಕ ಡಾ.ಕೆ ಅನ್ಬದಾನಿ ತಿಳಿಸಿದರು.          ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಜಯರಾಜು ಎಂಬ ದಲಿತರ ಮನೆಯೊಂದರಲ್ಲಿ ವಾಸ್ತವ್ಯ , ಮಾಜಿ ಸಚಿವ ಬಿ ಸೋಮಶೇಖರ್ ರವರ ಗ್ರಾಮವೂ ಸಹ ಆಗಿದ್ದು, ಈ ಗ್ರಾಮ ಅಭಿವೃದ್ಧಿ ಯಾಗದ ಕಾರಣ ಈ ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಿರುವುದಾಗಿ ತಿಳಿಸಿದರು. ಸಾರ್ವಜನಿಕರನ್ನು ಅಧಿಕಾರಿಗಳು ಕಚೇರಿಯಲ್ಲಿ ಉಡಾಫೆ ರೀತಿಯಲ್ಲಿ ಕಾಣುತ್ತಾರೆ ಜನರ ಕಷ್ಟ ಅಧಿಕಾರಿಗಳಿಗೆ ಅರ್ಥವಾಗಲಿ  ಅನ್ನುವುದಕೋಸ್ಕರ  ಅಧಿಕಾರಿಗಳ ಜೊತೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲು ಸೂಚಿಸಿದ್ದೇನೆ. ಈ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ ಅದನ್ನು ಶೀಘ್ರವೇ ಬಗೆಹರಿಸುತ್ತೇನೆ ಎಂದರು.

  ಅಧಿಕಾರಗಳನ್ನು ಬೆಳಗಾವಿ ವರ್ಗಾವಣೆ ಮಾಡುವುದಾಗಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ,ಹೌದು ಸಾರ್ವಜನಿಕರ ಕೆಲಸ ಮಾಡದವರಿಗೆ ಇಲ್ಲಿ ಜಾಗವಿಲ್ಲ ಅವರನ್ನು ದೂರದ ಊರಿಗೆ ವರ್ಗಾವಣೆ ಮಾಡಿದಾಗ ಅವರಿಗೂ ಕಷ್ಟ ಅರ್ಥವಾಗುತ್ತದೆ. ಅದಕ್ಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದರು. ಇನ್ನೂ ಪಿಡಿಒಗಳ ಸಭೆಯಲ್ಲೂ ನರೇಗಾ ಯೋಜನೆಯಡಿ ಸಾಕಷ್ಟು ಕಾರ್ಯಕ್ರಮವಿದೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು . ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

Share this article

About Author

Madhu