ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೆ ಅಭಿನಂದನಾ ಸಮಾರಂಭವು ನಡೆಯಿತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೆ ಅಭಿನಂದನಾ ಸಮಾರಂಭವು ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಕಾಂಗ್ರೆಸ್ ಪಕ್ಷವು ಸದಾ ಸಿದ್ದವಿದೆ. ಕಾರ್ಯಕರ್ತರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಮ್ಮ ಶಕ್ತಿಯನ್ನು ತೋರಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಸೋಲಿಗೆ ಎದೆಗುಂದಬಾರದು. ಸಿದ್ದರಾಮಯ್ಯ ಅವರ ಆಡಳಿತ ಅವಧಿಯ ಜನಪ್ರಿಯ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ಕೊಡಲು ಪಕ್ಷವು ಸದಾ ಸಿದ್ದವಿದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಸ್ಥಿತ್ವವನ್ನು ಎದುರಾಳಿಗಳಿಗೆ ಕಾಂಗ್ರೆಸ್ ಪಕ್ಷ ಇನ್ನೂ ಗಟ್ಟಿಯಾಗಿದೆ ಎಂಬ ಇದೆ ಸಂದೇಶ ನೀಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಂತರ ಮಾತನಾಡಿ ರಾಜಕೀಯ ಸನ್ನಿವೇಶ ಹಿನ್ನಲೆ ಕೆಲವೊಮ್ಮೆ ಮಾತಾಡದಂತೆ ಸಂದರ್ಭ ಕೈ ಕಟ್ಟಿ ಹಾಕುತ್ತದೆ.ಜನ ಕಾರ್ಯಕ್ರಮ ಆಧಾರದ ಮೇಲೆ ಮತ ಹಾಕಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು.ಆದರೇ ಚುನಾವಣೆ ಸಂದರ್ಭದಲ್ಲಿ ಭಾವನೆ ಸೇರಿದಂತೆ ಹಲವು ಕಾರಣಗಳು ಸೇರಿಕೊಳ್ಳುತ್ತವೆ.ಆದ್ದರಿಂದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸೋಲು ಉಣ್ಣಾಬೇಕಾಯಿತು.ಜನಪ್ರಿಯತೆಗೆ ಕಾರ್ಯಕ್ರಮ ತಂದಿದಲ್ಲ, ರೈತರಿಗೆ ಅನುಕೂಲ ಆಗವಂತೆ ಕಾಂಗ್ರೆಸ್ ಸರ್ಕಾರ ಯೋಜನೆ ತಂದಿತ್ತು.ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಏಕೆ ಮತ ಹಾಕಿಲ್ಲ ಎಂದು ಕೇಳಿದ್ರೆ ಅವರ ಬಳಿ ಉತ್ತರವಿಲ್ಲ.ನಮ್ಮವರು ಮುಖ್ಯಮಂತ್ರಿ ಆಗಲೆಂದು ಮತ ಹಾಕಿದ್ದಾರೆ ಅಷ್ಟೇ.ಉದ್ಯೋಗ ಸೃಷ್ಟಿಯಲ್ಲಿ ನಮ್ಮ ರಾಜ್ಯ ನಂ.೧. ಆಗಿತ್ತು.ನಾವು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೀವಿ. ಯಾರನ್ನ ಬಿಟ್ಟಿದ್ದೀವಿ ಹೇಳಿ.ನಾವು ತಪ್ಪು ಮಾಡಿದೋ, ಜನರಿಗೆ ನಾವು ಸರಿಯಾಗಿ ಹೇಳಕ್ಕಾಗಿಲ್ಲ.ನಮ್ಮ ಸರ್ಕಾರದಲ್ಲಿ ಹಲವು ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿಲ್ಲ.ಅದರಲ್ಲೊಂದು ಮಂಡ್ಯ ಜಿಲ್ಲೆಯ ಕಾರ್ಯಕರ್ತರ ಕೆಲಸ ಮಾಡಿಲ್ಲ.ಅದಕ್ಕೆ ಯಾರು ಕಾರಣ ಅಂತಾ ಹೇಳಲ್ಲ. ಇಲ್ಲಿ ಪತ್ರಿಕೆಯವರಿದ್ದಾರೆ. ಅದನ್ನೇ ಹೆಡ್ ಲೈನ್ ಬರಿತ್ತಾರೆ. ಈಗ ಬೇಡ.ನಾವು ಕಾರ್ಯಕರ್ತರ ಕೆಲಸ ಮಾಡಿದ್ರೆ ಇಂತಹ ಪಲಿತಾಂಶ ಬರುತ್ತಿರಲಿಲ್ಲ.ಮುಂದೆ ಬರುವ ಸ್ಥಳೀಯ, ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡೋಣ.ನಿಜವಾದ ಮುಖಂಡರಿಗೆ ಜಿಲ್ಲೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ.
ಯುವ ಕಾರ್ಯಕರ್ತರನ್ನು ಹುಟ್ಟು ಹಾಕಿ ಕೆಲಸ ಮಾಡಿ ಪಕ್ಷ ಕಟ್ಟಬೇಕು.ಯಾರು ಜನರಿಗೆ ಸೇವೆ ಮಾಡಬೇಕು ಎನ್ನುವ ಮನಸ್ಸಿದವರಿಗೆ ಸ್ಥಾನಮಾನ ಕೊಡಿ, ಆಗ ಪಕ್ಷ ಉಳಿಯುತ್ತೆ ನನಗೆ ನಂಬಿಕೆಯಿದೆ ಜಿಲ್ಲೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ.ಈ ಸರ್ಕಾರದಲ್ಲಿ ಸಮಸ್ಯೆ ಬಂದೆ ಬರುತ್ತೆ.ಆಗ ನಮ್ಮ ಕಾರ್ಯಕರ್ತರ ಪರ ಪಕ್ಷ ನಿಂತೇ ನಿಲುತ್ತೆ.ಯಾರು ಹೆದರುವ ಅವಶ್ಯಕತೆಯಿಲ್ಲ.ನಮ್ಮ ಪಕ್ಷಕ್ಕೆ ನೋವಿದೆ. ೮೦ ಸೀಟು ಇದ್ರು ಅಧಿಕಾರ ಬಿಟ್ಟಿದ್ದೇವೆ.ಕೋಮುವಾದಿ ಪಕ್ಷ ಬಿಜೆಪಿ ಅನ್ನು ದೂರ ಇಡುವ ಸಲುವಾಗಿ.ರಾಹುಲ್ ಗಾಂಧಿ ನೇರವಾಗಿ ಮೋದಿಯನ್ನು ಸಂಸತಲ್ಲಿ ಅಟ್ಯಾಕ್ ಮಾಡಿದ್ದರು ಅವರು ಸ್ಪಷ್ಟಿಕರಣ ಇದುವರೆಗೂ ಕೊಟ್ಟಿಲ್ಲ.ಎರಡು ಜರ್ನಲಿಷ್ಟನ್ನು ಕೆಲಸದಿಂದ ತೆಗಸಿದ್ರೂ.ಎನ್ ಡಿ ಟಿವಿ ವಿರುದ್ದ ಈಡಿ ಕೇಸ್ ಹಾಕಿಸಿದ್ರೂ.ಮೋದಿ ಸ್ನೇಹಿತ ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಹೋಗಿದ್ದಾರೆ.ಸಿಎಂ ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಿದೆ.ಅದರ ಜತಗೆ ಪಕ್ಷವನ್ನು ಕಟ್ಟಬೇಕಿದೆ.ದೇಶದ ಕಟ್ಟುವ ಸಲುವಾಗಿ ಪಕ್ಷ ಉಳಿಯಬೇಕಿದೆ.ನಾವು ಸೋತಿದ್ದೇವೆ ಒಪ್ಪೊಣ, ಜನಾದೇಶಕ್ಕೆ ಬೆಲೆ ಕೊಡೊಣ. ಮತ್ತೇ ಜನರ ಬಳಿ ಹೋಗಿ ಕಾಂಗ್ರೆಸ್ ಬಗ್ಗೆ ಹೇಳೋಣ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು ,ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಬಲರಾಂ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಗಣಿಗ ರವಿಕುಮಾರ್, ಎಂ.ಡಿ.ಕೃಷ್ಣಮೂರ್ತಿ, ಕೆರೆಗೋಡು ಸೋಮಶೇಖರ್, ನಾಗೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಸ್ವಾಮಿನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ರವೀಂದ್ರ ಬಾಬು, ಕಿರಣ್ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.