Print this page

ಶಾಲೆಗೆ ಬೀಗ ಜಡಿದು ಪ್ರತಿಭಟನೆ.

ಶಾಲೆಯಲ್ಲಿ ದಿನನಿತ್ಯ ಶಿಕ್ಷಕರ ಮಕ್ಕಳಿಗೆ ಸರಿಯಾದ ಪಾಠ ಮಾಡುತ್ತಿಲ್ಲಾ ಎಂದು ಬೀಗ ಜಡಿದು ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ತೆಂಡೇಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಿಯಾದ ಶಿಕ್ಷಣ ನೀಡುತ್ತಿಲ್ಲಾ ಎಂದು ಪೋಷಕರು ಶಾಲೆಗೆ ಬೀಗ ಜಡಿದು ಶಿಕ್ಷಕರ ವಿರುದ್ಧ ಪ್ರತಿಭಟನೆ ಮಾಡಿದರು.

ಶಾಲೆಯಲ್ಲಿ ದಿನನಿತ್ಯ ಶಿಕ್ಷಕರ ಮಕ್ಕಳಿಗೆ ಸರಿಯಾದ ಪಾಠ ಪ್ರವಚನ ನೀಡುತಿಲ್ಲ ಬದಲಿಗೆ ಬೈಗುಳ ,ಕಿರುಕುಳ ನೀಡುತ್ತಾರೆ ಎಂದು ಆರೋಪ ಮಾಡಿದರು. ಸ್ಥಳಕ್ಕೆ ತಾಲ್ಲೂಕು ಶಿಕ್ಷಣಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟುಬಿದ್ದರು..

ನಂತರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪೋಷಕರ ಸಮಸ್ಯೆಗಳನ್ನು ಬಗೆಹರಿಸುವ ಆಶ್ವಾಸನೆ ನೀಡಿ ಪೋಷಕರ ಮನಹೋಲಿಸಿದರು. ನಂತರ ಶಾಲೆಯ ಬೀಗ ತೆಗೆಸಿ ಮಕ್ಕಳಿಗೆ ಪಾಠಮಾಡಲು ಅನುವು ಮಾಡಿಕೊಟ್ಟರು.ನಂತರ ಪ್ರತಿಭಟನಾಕಾರರು ಶಿಕ್ಷಣಾಧಿಕಾರಿಗಳ ಆಶ್ವಾಸನೆ ಮೇರೆಗೆ ಪ್ರತಿಭಟನೆ ಕೈ ಬಿಟ್ಟರು.

ಈಗಾಗಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂದು ಮುಂದು ನೊಡತ್ತಿರುವಾಗ ಇಂತಹ ಘಟನೆಗಳು ಪೋಷಕರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.ಕೂಡಲೇ ಇಂತಹ ಘಟನೆ ಮರುಕಳಿಸದಂತೆ ಶಿಕ್ಷಣ ಅಧಿಕಾರಿಗಳು ಗಮನಹರಿಸುತ್ತಾರ ಕಾದು ನೋಡಬೇಕು

Share this article

About Author

Madhu