Print this page

ಕೆ.ಆರ್.ಪೇಟೆಯಲ್ಲಿ ಮತ್ತೆ ಸರಗಳ್ಳರ ಕೈಚಳಕ ,ನಿಲ್ಲದ ಸರಗಳ್ಳತನ 30ಗ್ರಾಮ್ ಚಿನ್ನದ ಸರ ಕಸಿದು ಪರಾರಿ.

 ಕೆ ‌.ಆರ್. ಪೇಟೆಯಲ್ಲಿ ಮತ್ತೆ ಸರಗಳ್ಳರ ಕೈಚಳಕ,30ಗ್ರಾಮ್ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ

 ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಸುಭಾಷ್ ನಗರದಲ್ಲಿ ಮತ್ತೆ ಸರಗಳ್ಳರು ಕೈಚಳಕ ಮುಂದುವರಿಸಿದ್ದು , ಬೈಕ್ ನಲ್ಲಿ ಬಂದ ಅಪರಿಚಿರಿಬ್ಬರು ಟೀ ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದ  ಮಹಿಳೆಯ ಚಿನ್ನ ದ ಸರ ಕಸಿದು ಪರಾರಿಯಾಗಿರುವ ಘಟನೆ.ಪಟ್ಟಣದ ಸುಭಾಷ್ ನಗರದಲ್ಲಿ ಇಂದು ಮುಂಜಾನೆ ಸುಮಾರು 5.30 ಗಂಟೆಯ ಸಮಯದಲ್ಲಿ ನಡೆದಿದೆ.

 ರತ್ನಮ್ಮ  ಚಿನ್ನದ ಸರ ಕಳೆದುಕೊಂಡ ಮಹಿಳೆ.ಸುಭಾಷ್ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದಲ್ಲಿರುವ ತಮ್ಮ ಟೀ ಕ್ಯಾಂಟೀನ್ ಅಂಗಡಿಯ ಮುಂದೆ ಕಸ ಗುಡಿಸುವಲ್ಲಿ ನಿರತರಾಗಿದ್ದರು.ಈ ವೇಳೆ ಟೀ ಕುಡಿಯುವ ಸೋಗಿನಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ಬಂದು ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ.

ಕಳೆದ ವಾರದ ಹಿಂದಷ್ಟೆ ಬೈಕ್ ನಲ್ಲಿ ಬಂದ ಅಪರಿಚಿತರು ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯ ಹೇಮಗಿರಿ ರಸ್ತೆಯ  ಜಗದಾಂಬ ಎಂಬುವರ ಮಾಂಗಲ್ಯ ಸರವನ್ನು ಇದೇ ಮಾದರಿಯಲ್ಲಿ ಕಸಿದು ಪರಾರಿಯಾಗಿದ್ದರು ಅದು ಮಾಸು ಮುನ್ನವೇ ಮತ್ತೊಂದು ಪ್ರಕರಣ ನೆಡೆದಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.

 ಈ ರೀತಿಯಾಗಿ ಕಳ್ಳತನ ಪ್ರಕರಣಗಳು ನೆಡೆಯುತ್ತಿದ್ದರು ಪೋಲಿಸ್ ಇಲಾಖೆ ಎನು ಮಾಡುತ್ತಿದ್ದೆ ,ಮತ್ತು ಸರಗಳ್ಳರ ಜಾಲವನ್ನು ಕಂಡುಹಿಡಿಯಬೇಕು ಎಂದು ಸಾರ್ವಜನಿಕರ  ಪೋಲಿಸ್ ಇಲಾಖೆ   ಮೇಲೆ ಗುಡುಗಿದ್ದಾರೆ.

 ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

Last modified on 23/07/2018

Share this article

About Author

Madhu