ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ತಾಲ್ಲೂಕು ತಹಸೀಲ್ದಾರ್ ಕಚೇರಿ ಮುಂದೆ ಆಗಸ್ಟ್ 14ರಂದು ಸಾಮೂಹಿಕ ಸತ್ಯಾಗ್ರಹ ಅಹೋರಾತ್ರಿ ಧರಣಿ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ಮಳವಳ್ಳಿ ತಾಲ್ಲೂಕು ತಹಸೀಲ್ದಾರ್ ಕಚೇರಿ ಮುಂದೆ ಆಗಸ್ಟ್ 14ರಂದು ಸಾಮೂಹಿಕ ಸತ್ಯಾಗ್ರಹ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಿಐಟಿಯು ತಾಲ್ಲೂಕು ಸಂಚಾಲಕಿ ಮಹದೇವಮ್ಮ ತಿಳಿಸಿದರು.ಮಳವಳ್ಳಿ ಪಟ್ಟಣದ ಕೂಲಿಕಾರರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐಸಿಡಿಎಸ್ ಯೋಜನೆಯಲ್ಲಿ ಶೇ 75 , ಬಿಸಿಯೂಟ ಶೇ 40 ಅನುದಾನ ಕಡಿತ ಮಾಡಿ ನೇರ ನಗದು ಕೊಡುವ ಮತ್ತು ಬಿಸಿಯೂಟದಲ್ಲಿ ಕೇಂದ್ರೀಕೃತ ಅಡುಗೆ ಮನೆಯನ್ನು ತೆರೆಯುವುದನ್ನು ವಿರೋಧಿಸಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಐಸಿಡಿಎಸ್ , ಮಧ್ಯಾಹ್ನದ ಬಿಸಿಯೂಟ, ಆರೋಗ್ಯ, ಶಿಕ್ಷಣ, ಮೊದಲಾದ ಯೋಜನೆ ಅಡಿಯಲ್ಲಿ ಲಕ್ಷಾಂತರ ಅಂಗನವಾಡಿ, ಬಿಸಿಯೂಟ,ಆಶಾ ನೌಕರರು ಯಾವುದೇ ಕನಿಷ್ಠ ಕೂಲಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆಎಂದು ಆರೋಪಿಸಿದರು.ಇದಲ್ಲದೆ ಕೇಂದ್ರ ಸರ್ಕಾರ ವಿರುದ್ದ ಹೋರಾಟ ಮಾಡುತ್ತಿದೆ ಆಗಸ್ಟ್ 14 ರಂದುಸಂಜೆ 6 ಗಂಟೆಗೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಕಾರ್ಯಕ್ರಮದಲ್ಲಿ ಬುದ್ದಿಜೀವಿಗಳು ,ಸಾಹಿತಿಗಳು, ಕಲಾವಿದರು ಹಾಗೂ ಭಾಷಣಕಾರರಾಗಿ ವೈ.ಎಸ್ ಗುರುಶಾಂತ್ ಆಗಮಿಸಲಿದ್ದಾರೆ. ಇದಲ್ಲದೆ ಧರಣಿಯಲ್ಲಿ ಅನೇಕ ಸಂಘಟನೆಗಳು ಭಾಗವಹಿಸಲಿದೆ ಎಂದರು ಗೋಷ್ಟಿಯಲ್ಲಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ,ಜವರಯ್ಯ ಸೇರಿದಂತೆ ಮತ್ತಿತ್ತರರು ಇದ್ದರು.