Print this page

ಡಿಕೆಶಿ ಬಂಧನ ವಿರೋಧಿಸಿ ಕೆ.ಆರ್.ಪೇಟೆಯಲ್ಲಿ ಮೈತ್ರಿಪಕ್ಷಗಳ ಮುಖಂಡರಿಂದ ರಸ್ತೆ ತಡೆ.

ಡಿಕೆಶಿ ಬಂಧನ ವಿರೋಧಿಸಿ ಕೆ.ಆರ್.ಪೇಟೆಯಲ್ಲಿ ಮೈತ್ರಿಪಕ್ಷಗಳ ಮುಖಂಡರಿಂದ ರಸ್ತೆ ತಡೆ..ಟಯರ್ ಸುಟ್ಟು ಆಕ್ರೋಶ...ರಾಜಕೀಯ ದುರುದ್ಧೇಶದ ಮೊಕದ್ದಮೆ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್....

 ಕರ್ನಾಟಕ ರಾಜ್ಯದ ಮಾಜಿಸಚಿವ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರದ ಆದಾಯ ತೆರಿಗೆ ಇಲಾಖೆಯು ಹವಾಲಾ ಹಣ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ಬಂಧಿಸಿ ತನಿಖೆಗೆ ಸಹಕಾರ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು... ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಟಯರ್ ಗಳನ್ನು ಸುಟ್ಟು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು... ಕೇಂದ್ರ ಸರ್ಕಾರವು ಕೂಡಲೇ ಇಡಿ ಇಲಾಖೆಗೆ ನಿರ್ದೇಶನ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆಗೊಳಿಸಿ ರಾಜಕೀಯ ದುರುದ್ಧೇಶದಿಂದ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ಮಾಜಿಶಾಸಕ ಬಿ.ಪ್ರಕಾಶ್, ಜಿ.ಪಂ ಸದಸ್ಯರಾದ ಹೆಚ್.ಟಿ.ಮಂಜು, ಬಿ.ಎಲ್.ದೇವರಾಜು, ರಾಮದಾಸು, ಮಾಜಿ ಜಿ.ಪಂ ಸದಸ್ಯರಾದ ಬೇಲದಕೆರೆ ಪಾಪೇಗೌಡ, ಬಿ.ನಾಗೇಂದ್ರಕುಮಾರ್, ವಿ.ಮಂಜೇಗೌಡ, ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ರವೀಂದ್ರಬಾಬು, ಮುಖಂಡರಾದ ಹರಳಹಳ್ಳಿ ವಿಶ್ವನಾಥ, ಪ್ರೇಮಕುಮಾರ್, ಕೆ.ಬಿ.ಮಹೇಶ್ ಮತ್ತಿತರರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿ...

Share this article

About Author

Super User