ಸಾಮಾನ್ಯ ಮಾಹಿತಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಡಿದೆ.ಹಣ ತೆಗೆಯೋ  ಮುನ್ನ ಎಚ್ಚರ.!

ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಸೂಕ್ಷ್ಮವಾಗಿಸಲು ಆಯೋಗ ನೋಟಿಸ್ ನೀಡಿದೆ. ಈ ಪ್ರಕಾರ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡುವ ಖಾತೆದಾರರ ಮಾಹಿತಿಯನ್ನ ಚುನಾವಣಾ ಸಿಬ್ಬಂದಿ ಪಡೆಯಲಿದ್ದಾರೆ. ಹಾಗೇ 10 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಾಪಸ್ ಪಡೆದರೆ ತೆರಿಗೆ ಇಲಾಖೆಗೆ ನೇರವಾಗಿ ಮಾಹಿತಿ ಹೋಗುತ್ತದೆ.ಈ ಪ್ರಕಾರ ಮುಂದಿನ ಒಂದುವರೆ ತಿಂಗಳು ಖಾತೆಗಳ ಮೇಲೆ ನಿಗಾ ಇಡಲಾಗುತ್ತದೆ. ಇನ್ನು ಅಭ್ಯರ್ಥಿಗಳ ದೈನಂದಿನ ಖರ್ಚನ್ನ ನೇರವಾಗಿ ಚುನಾವಣಾ ಕ್ಯಾಮಾರಾ ಸಿಬ್ಬಂದಿ ಸೆರೆ ಹಿಡಿದ ದೃಶ್ಯಗಳ ಆಧಾರದಲ್ಲಿ ಆಡಿಟ್ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚು ಖರ್ಚು ಮಾಡಿದರೆ 24 ಗಂಟೆಯೊಳಗೆ ಕಠಿಣ ಕ್ರಮ ವಹಿಸಲಾಗುತ್ತದೆ.ಒಂದು ವೇಳೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿದರೆ ಆದಾಯ ಇಲಾಖೆ ಖಾತೆದಾರರನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಯಾವ ಖರ್ಚಿಗೆ ಹಣ ಡ್ರಾ ಮಾಡಿದ್ದೀರ, ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಾ? ಎಂದು ಅವರ ಬಳಿ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತದೆ.

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿ: ಇನ್ನು ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, sಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.ಇನ್ನೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಒಂದು ವೇಳೆ ನಿಯಮ ಮೀರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಎಲೆಕ್ಷನ್ ಪ್ರಚಾರ ನಡೆಸಿದ್ರೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.

ಚುನಾವಣಾ ಆಯೋಗದ ಹೆಲ್ಪ್ ಲೈನ್ ಸಂಖ್ಯೆ '1950' ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸಲಿದೆ. ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ರೆ ಮೊಬೈಲ್ ಮೂಲಕ ದೂರು ನೀಡಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿರಿಸಲಾಗುವುದು. ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಹೇಳಿದ್ದಾರೆ.ಇನ್ನು ಪಾನ್ ಕಾರ್ಡ್ ನಂಬರ್ ನಮೂದಿಸದಿದ್ದರೆ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗುವುದು. ದಿವ್ಯಾಂಗರು ಮತ ಚಲಾಯಿಸಲು ವೀಲ್ ಚೇರ್ ವ್ಯವಸ್ಥೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ತಲಾ 14 ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ ನಡೆಯಲಿದೆ.

 

ಕೇಬಲ್ ಟಿವಿ ಆಪರೇಟರ್ಸ್ ದಾರಿ ತಪ್ಪಿಸುತ್ತಿದ್ದಾರೆ. ಎಚ್ಚರ ಗ್ರಾಹಕರೇ ಎಚ್ಚರ!!

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಗೆ ಬಂದಿದ್ದು. ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 184ರು ಎಂದು ಈ ಹಿಂದೆ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಈ ಮೊತ್ತ 154ರು ಗಳಾಗಲಿವೆ. ಚಂದಾದಾರರಿಕೆ ಮೊತ್ತ 130ರು ಪ್ಲಸ್ ತೆರಿಗೆ ಮೊತ್ತ ಸೇರಲಿದೆ.

 ಕೇಬಲ್ ಟಿವಿ ಆಪರೇಟರ್ಸ್  ನಿಮಗೆ ಸರಿಯಾದ ಮಾಹಿತಿ ಕೊಡದೇ ನಿಮಗೆ ಕೇಂದ್ರ ಸರಕಾರದ ಮಹತ್ತರ ಸುಧಾರಣೆಯೊಂದರ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ನಿಮಗೆ ಕೇಂದ್ರ ಸರಕಾರದ ಬಗ್ಗೆ ಕೋಪ ಬರುವಂತೆ ಮಾಡುತ್ತಿದ್ದಾರೆ. ಅದು ಏನು ಎಂದು ವಿವರಿಸುತ್ತೇನೆ. ನಿಮ್ಮ ಮನೆಯ ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಕೇಬಲ ಮೂಲಕ ನಿಮ್ಮ ಮನೆ ತಲುಪುತ್ತಿದ್ದರೆ ನೀವು ಈ ಜಾಗೃತ ಅಂಕಣವನ್ನು ಓದಲೇಬೇಕು ಮತ್ತು ಇತರರಿಗೂ ತಿಳಿಸಬೇಕು. ನೀವು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮತ್ತು ಬೇರೆಯವರಿಗೆ ತಿಳಿಸಿದರೆ ಉಳಿಯುವುದು ನಿಮ್ಮದೇ ಹಣ ವಿನ: ನನಗೇನೂ ವೈಯಕ್ತಿಕ ಲಾಭವಿಲ್ಲ. ಬರುವ ತಿಂಗಳಿನಿಂದ ನೀವು ನಿಮ್ಮ ಆಯ್ಕೆಯ ಚಾನೆಲ್ ಗಳನ್ನು ಮಾತ್ರ ವೀಕ್ಷಿಸಿ ಅದಕ್ಕೆ ತಗಲುವ ಹಣವನ್ನು ಮಾತ್ರ ನೀಡಿದರೆ ಸಾಕು ಎನ್ನುವ ವಿಷಯ ನಿಮ್ಮ ಗಮನಕ್ಕೆ ಖಂಡಿತ ಬಂದಿರುತ್ತದೆ. ಕೇಬಲ್ ಆಪರೇಟರ್ಸ್ ಏನು ಹೇಳುತ್ತಿದ್ದಾರೆ ಎಂದರೆ “ನೂರಾ ಮೂವತ್ತು ರೂಪಾಯಿ ಮತ್ತು ಜಿಎಸ್ ಟಿ ಇಪ್ಪತ್ತೆರಡು ರೂಪಾಯಿ ಒಟ್ಟು ಮಿನಿಮಮ್ 152 ರೂಪಾಯಿ ಕಟ್ಟಿದ್ರೆ ನಿಮಗೆ ನೂರು ಫ್ರೀ ಚಾನೆಲ್ ಗಳು ಕೊಡುತ್ತೇವೆ. ಇನ್ನು ಪೇ ಚಾನೆಲ್ ಗಳು ಬೇಕಾದರೆ ಅದರ ಗೊಂಚಲನ್ನು ಪಡೆಯುವ ಮೂಲಕ ಅದರ ಹಣವನ್ನು ಪ್ರತ್ಯೇಕ ನೀಡಬೇಕು. ಹಿಂದೆ ನಾವು ಮುನ್ನೂರು ರೂಪಾಯಿಗಳಿಗೆ ಲೆಕ್ಕವಿಲ್ಲದಷ್ಟು ಚಾನೆಲ್ ಗಳನ್ನು ನೀಡುತ್ತಿದ್ದೇವು. ಇನ್ನು ನಿಮಗೆ ಅಷ್ಟು ಚಾನೆಲ್ಸ್ ಬೇಕಾದರೆ ಐನೂರು ರೂಪಾಯಿ ತನಕ ಹೋಗುತ್ತದೆ. ಮೋದಿ ಸರಕಾರ ನಿಮ್ಮ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದೆ” ಎಂದು ಹೇಳುತ್ತಿದ್ದಾರೆ.

ಇಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ನೀವು ಜಿಎಸ್ ಟಿ ಸೇರಿಸಿ ಕಟ್ಟಲಿರುವ 152 ರೂಪಾಯಿಗಳಲ್ಲಿಯೇ ನಿಮಗೆ ಪೇ ಚಾನೆಲ್ ಗಳನ್ನು ಕೂಡ ನೋಡುವ ಅವಕಾಶ ಇದೆ. ಅದು ಹೇಗೆ ಎನ್ನುವುದನ್ನು ಹೇಳುತ್ತೇನೆ. ನಾವೆಲ್ಲ ಅಂದುಕೊಂಡದ್ದು ಏನೆಂದರೆ 130 ಪ್ಲಸ್ ಜಿಎಸ್ ಟಿ ಮಿನಿಮಮ್. ಅದರ ನಂತರ ಯಾವುದೇ ಪೇ ಚಾನೆಲ್ ಬೇಕಾದರೆ ಹೆಚ್ಚುವರಿ ಹಣ ಕೊಡಬೇಕು. ಆದರೆ ವಿಷಯ ಹಾಗಲ್ಲ. ನಿಮಗೆ 130 ಪ್ಲಸ್ ಜಿಎಸ್ ಟಿ ಒಳಗೆನೆ ಪೇ ಚಾನೆಲ್ ನೋಡುವ ಹಕ್ಕನ್ನು ಟ್ರಾಯ್ ನೀಡಿದೆ. ಉದಾಹರಣೆಗೆ ನೀವು ಸ್ಟಾರ್ ಪ್ಲಸ್ ಮತ್ತು ಝೀ ಹಿಂದಿ ಚಾನೆಲ್ ನೋಡಬೇಕು ಎಂದು ಬಯಸುತ್ತಿದ್ದಿರಿ ಎಂದು ಅಂದುಕೊಳ್ಳೋಣ. ಆ ಚಾನೆಲ್ ಗಳ ದರ ತಲಾ 19 ರೂಪಾಯಿ. ಅದರೊಂದಿಗೆ ಕಲರ್ಸ್ ಕನ್ನಡ ಬೇಕು ಎಂದಾದರೆ ಅದಕ್ಕೆ ಹತ್ತು ರೂಪಾಯಿ ಇರಬಹುದು. ಇನ್ನು ಕೆಲವು ಚಾನೆಲ್ ಗಳು ಒಂದೆರಡು ರೂಪಾಯಿಗಳಿಗೆ ಸಿಗುತ್ತವೆ. ಇಷ್ಟೆಲ್ಲಾ ಪೇ ಚಾನೆಲ್ ಸೇರಿ ಒಟ್ಟು 12 ಪೇ ಚಾನೆಲ್ ನೀವು ಪಟ್ಟಿ ಮಾಡಿ ಆಯ್ಕೆ ಮಾಡಿದ್ದೀರಿ ಎಂದು ಇಟ್ಟುಕೊಳ್ಳೋಣ. ಅದು ನೂರಾ ಮೂವತ್ತು ರೂಪಾಯಿ ಒಳಗೆನೆ ಬಂದಿರುತ್ತದೆ. ಅದರ ಅರ್ಥ ಒಟ್ಟು 100 ಚಾನೆಲ್ ಗಳಲ್ಲಿ 12 ಪೇ ಚಾನೆಲ್ ನೀವೆ ಆಯ್ಕೆ ಮಾಡಿದರೆ ಉಳಿದ 88 ಫ್ರೀ ಏರ್ ಚಾನೆಲ್ ನಿಮಗೆ ಸಿಕ್ಕಿ ಒಟ್ಟು ನೂರು ಚಾನೆಲ್ ಆಗುತ್ತದೆ. ಆದರೆ ಕೇಬಲ್ ಟಿವಿ ಆಪರೇಟರ್ಸ್ ಏನು ಹೇಳುತ್ತಾರೆ ಎಂದರೆ ನೀವು ಸ್ಟಾರ್ ನವರ ಇಡೀ ಗೊಂಚಲನ್ನು ತೆಗೆದುಕೊಳ್ಳಬೇಕು. ಝೀ, ಸೋನಿಯವರ ಇಡೀ ಗೊಂಚಲನ್ನು ತೆಗೆದುಕೊಳ್ಳಬೇಕು, ಸಿಂಗಲ್ ಸಿಗಲ್ಲ ಎನ್ನುತ್ತಾರೆ. ಇದು ಅಪ್ಪಟ ಸುಳ್ಳು.

ಟ್ರಾಯ್ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಇದ.

ನಿಮಗೆ ಐದು ಪೇ ಚಾನೆಲ್, ಉದಾಹರಣೆಗೆ ಒಂದು ಝೀ ಕನ್ನಡ, ಒಂದು ಝೀ ನ್ಯೂಸ್, ಒಂದು ಸೋನಿ, ಒಂದು ಸ್ಟಾರ್ ಪ್ಲಸ್ ಮತ್ತು ಒಂದು ಕಲರ್ಸ್ ಕನ್ನಡ ಮಾತ್ರ ಬೇಕಾದರೆ ಅಷ್ಟು ಮಾತ್ರ ತೆಗೆದುಕೊಂಡು 130 ಪ್ಲಸ್ ಜಿಎಸ್ ಟಿ 22 ರೂಪಾಯಿ ಕೊಟ್ಟರೆ ಮುಗಿಯಿತು. ಅದರ ಮೇಲೆ ಹತ್ತು ರೂಪಾಯಿ ಕೂಡ ಜಾಸ್ತಿ ಕೊಡಬೇಕಾಗಿಲ್ಲ. ಇದನ್ನು ಕೇಬಲ್ ಟಿವಿ ಆಪರೇಟರ್ಸ್ ಮುಚ್ಚಿಡುತ್ತಿದ್ದಾರೆ. ಕೇಂದ್ರ ಸರಕಾರ ಜನರು ಕಡಿಮೆ ಹಣದಲ್ಲಿ ಕೇಬಲ್ ಟಿವಿ ಖರ್ಚು ಮುಗಿಸಲಿ ಎಂದು ಬಯಸಿ ಇಂತಹ ಉತ್ತಮ ಯೋಜನೆ ನೀಡುತ್ತಿದ್ದರೆ ಕೇಬಲ್ ಟಿವಿ ಆಪರೇಟರ್ಸ್ ಇಷ್ಟು ವರ್ಷ ಸುಲಿಗೆ ಮಾಡಿದ್ದು ಸಾಕಾಗಲಿಲ್ಲ ಎಂದು ಅದನ್ನು ಮುಂದುವರೆಸಿಕೊಂಡು ಹೋಗುವ ತಂತ್ರದಲ್ಲಿದ್ದಾರೆ. ನಿಮಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ “ಟ್ರಾಯ್” ಅವರ ವೆಬ್ ಸೈಟ್ ನೋಡಬಹುದು. ಇನ್ನೂ ಹೆಚ್ಚಿನ ವಿಷಯ ಬೇಕಾದರೆ ಕಂಪ್ರೈಸಸ್ ಆಫ್ ಇಂಟೆಲ್ ಕನೆಕ್ಷನ್ ರೆಗ್ಯೂಲೇಶನ್ 2017 ಇದರಲ್ಲಿ ಕ್ವಾಲಿಟಿ ಆಫ್ ಸರ್ವಿಸ್ ಎಂಡ್ ಕನ್ಸೂಮರ್ ಪ್ರೋಟೇಕ್ಷನ್ ರೆಗ್ಯೂಲೇಶನ್ 2017 ಇದನ್ನು ಓದಿಬಿಡಿ. ಕೇಬಲ್ ಟಿವಿ ಆಪರೇಟರ್ಸ್ ಗಳ ಅಸಲಿಯತ್ತು ಬಯಲಿಗೆ ಬಂದು ಬಿಡುತ್ತದೆ!..

 

ಸಾಮಾಜಿಕ ಜಾಲತಾಣ ಬಳಸುವಾಗ ನಾಳೆಯಿಂದ ಎಚ್ಚರವಿರಲಿ

Visitors Counter

255747
Today
Yesterday
This Week
This Month
Last Month
All days
85
95
247
1429
5243
255747

Your IP: 34.239.150.167
2024-10-08 12:57

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles