Print this page

ಅತೀ ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ಅಟೊಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರು

 ಅತೀ ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ಅಟೊಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರು.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಡ್ಯ:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗೆಟ್ ಬಳಿ ಅತೀ ವೇಗವಾಗಿ ಬಂದು ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಹೊಗುತ್ತಿದ್ದ ಅಟೊಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾರಿ ರಸ್ತೆ ಪಕ್ಕದಲ್ಲಿ ಮಗುಚಿ ಬಿದ್ದಿದೆ .ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅಟೊದಲ್ಲಿ ಪ್ರಯಾಣಿಸುತ್ತಿದ್ದ ಅಪ್ಪನಹಳ್ಳಿ ಒಬ್ಬ ವ್ಯಕ್ತಿಯ ಕಾಲಿ ಸ್ವಲ್ಪ ಪ್ರಮಾಣದ ಗಾಯಗಾಳಾಗಿದೆ. ಗಾಯಾಳು ಅಟೋ ಡ್ರೈವರ್ ನಾಗರಾಜು ವನ್ನು ಸಂತೇಬಾಚಹಳ್ಳಿ ಅರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.ಒಟ್ಟು ಕಾರಿನಲ್ಲಿ ಐದ ಜನ ಯುವಕರು ಇದ್ದು ಪಾನಮತ್ತರಾಗಿದ್ದು ಸ್ಥಳದಿಂದ ಪೇರಿ ಕಿತ್ತಿದ್ದಾರೆ . ಅತೀ ವೇಗವಾಗಿ ಕಾರು ಚಾಲಾಯಿಸಿದ್ದೆ ಅಪಘಾತಕ್ಕೆ ಕಾರಣ .ಸದ್ಯಕ್ಕೆ ಕಾರು ಅನುವಿನಕಟ್ಟೆ ಗ್ರಾಮದ ಸಾಗರ್ ಎಂಬುವರದ್ದು ಎಂಬ ಮಾಹಿತಿ ಇದ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Share this article

About Author

Madhu

Media